Belagavi

ರೋಟರಿ ಕ್ಲಬ್ ಆಫ್ ವೇಣುಗ್ರಾಮನ 25 ನೇ ವಾರ್ಷಿಕೋತ್ಸವದ ಹಿನ್ನೆಲೆ

Share

ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಲಗಾಮನ 25 ನೇ ವಾರ್ಷಿಕೋತ್ಸವದ ಹಿನ್ನೆಲೆ ಜನವರಿ 26 ರಂದು ಗಣರಾಜ್ಯೋತ್ಸವದ ಅಂಗವಾಗಿ ಮೆಗಾ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅಧ್ಯಕ್ಷ ವಿನಯಕುಮಾರ್ ಬಾಳಿಕಾಯಿ ಅವರು ತಿಳಿಸಿದರು.

ಈ ಕುರಿತು ಬೆಳಗಾವಿಯಲ್ಲಿ ಇಂದು ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಲಗಾಮನ 25 ನೇ ವಾರ್ಷಿಕೋತ್ಸವದ ಹಿನ್ನೆಲೆ ಜನವರಿ 26 ರಂದು ಗಣರಾಜ್ಯೋತ್ಸವದ ಅಂಗವಾಗಿ ಮೆಗಾ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಮಹಾವೀರ ಭವನದಲ್ಲಿ ನಡೆಯುವ ಈ ಶಿಬಿರಕ್ಕೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸೇರಿದಂತೆ ಇನ್ನುಳಿದ ಸಂಘ ಸಂಸ್ಥೆಗಳು ಕೈಜೋಡಿಸಿವೆ. ಕಳೆದ 8 ತಿಂಗಳಿನಿಂದ ಇದಕ್ಕಾಗಿ ತಯಾರಿಯನ್ನು ನಡೆಸಿದ್ದು, ಶಿಬಿರದಲ್ಲಿ ಸುಮಾರು 800 ರಿಂದ ಒಂದು ಸಾವಿರ ಜನರು ಭಾಗಿಯಾಗುವ ನಿರೀಕ್ಷೆಯಿದೆ. ಬೆಳಗಾಮ್ ಬ್ಲಡ್ ಬ್ಯಾಂಕ್. ಕೆ.ಎಲ್.ಇ ಬ್ಲಡ್ ಬ್ಯಾಂಕ್, ಮಹಾವೀರ ಬ್ಲಡ್ ಬ್ಯಾಂಕ್. ಸಿವ್ಹಿಲ್ ಹಾಸ್ಪಿಟಲ್ ಬ್ಲಡ್ ಬ್ಯಾಂಕ್, ಮಹೇಶ್ ಫೌಂಡೇಶನ್ ಬ್ಲಡ್ ಬ್ಯಾಂಕ ಕೈಜೋಡಿಸಿದ್ದು, ರಕ್ತದಾನಿಗಳಿಗೆ ಒಂದು ಪಾಸಪೋರ್ಟ್ ನೀಡುವ ಹೊಸ ಪ್ರಯೋಗವನ್ನು ಮಾಡಲಾಗುತ್ತಿದೆ. ಇದು ರಕ್ತದಾನಿಗಳ ರಕ್ತದಾನದ ಮಾಹಿತಿಯನ್ನು ನೀಡಲಿದೆ. ದೇಶ ಮತ್ತು ವಿದೇಶದಲ್ಲಿಯೂ ಇದು ಮಾನ್ಯತೆಯನ್ನು ಪಡೆದಿದೆ ಎಂದರು.
ಇನ್ನು ಇವೆಂಟ್ ಪ್ರಮುಖರಾದ ಡಿ.ಬಿ. ಪಾಟೀಲ್ ಅವರು ಇತ್ತಿಚೆಗೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಇದರಲ್ಲಿ ಗಾಯಗೊಂಡವರ ಚಿಕಿತ್ಸೆಗೆ ನೆರವಾಗುವಂತೆ ರಕ್ತವನ್ನು ಸಂಗ್ರಹಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಸುಮಾರು 22 ಸಂಘ ಸಂಸ್ಥೆಗಳು ಸಹಕಾರ್ಯವನ್ನು ನೀಡಿವೆ. ರಕ್ತದ ಕೊರತೆಯನ್ನು ಹೊಗಲಾಡಿಸಿ ಬೇರೆಯವರ ಜೀವವನ್ನು ಉಳಿಸಲು ರಕ್ತದಾನ ಶಿಬಿರ ಸಹಾಯಕವಾಗಿದೆ. ರಕ್ತದಾನ ಮಾಡುವುದರಿಂದ ರಕ್ತದಾನ ಮಾಡುವುದರಿಂದ ರಕ್ತ ಕಡಿಮೆಯಾಗುವುದಿಲ್ಲ. ಹೊಸ ರಕ್ತ ನಿರ್ಮಾಣವಾಗುತ್ತದೆ ಎಂದರು. ಬೈಟ್

ಈ ಸಂದರ್ಭದಲ್ಲಿ ಕಾರ್ಯದರ್ಶಿ ಲತೇಶ್ ಪೋರವಾಲ್, ಇವೆಂಟ್ ಚೇರಪರ್ಸನ್ ಅಶ್ವಿನಿ ಪಾಟೀಲ್. ಇವೆಂಟ್ ಚೇರಪರ್ಸನ್ ಕೇತನ ನಂದೇಶ್ವರ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!