Belagavi

ಡಿಕೆಶಿ ಫಿರೋಜ್ ಸೇಠ್ ಮನೆಗೆ ಭೇಟಿ ಹಿನ್ನೆಲೆ…

Share

ಕಾಂಗ್ರೆಸನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಫಿರೋಜ್ ಸೇಠ್ ಸೇರಿದಂತೆ ಇನ್ನುಳಿದ ನಾಯಕರೊಂದಿಗೆ ಭೇಟಿಯಾಗಿರುವುದಕ್ಕೆ ಬೇರೆ ಅರ್ಥ ಕಲ್ಪಿಸಿ ಮಾಧ್ಯಮದವರು ತಮ್ಮ ಇಮೇಜನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ರಾಜ್ಯ ಉಸ್ತುವಾರಿ ಸುರ್ಜೆವಾಲಾ ಅವರ ಪ್ರತ್ಯೇಕ ಸಭೆ ಹಿನ್ನೆಲೆ ಕೆಲ ನಾಯಕರು ಅಸಮಾಧಾನಗೊಂಡು ರಾಹುಲ್ ಗಾಂಧಿ ಅವರಿಗೆ ನಾಳೆ ದೂರು ನೀಡಲಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನಿಮಗೆ ಎಲ್ಲವನ್ನು ಯಾರೋ ಸುಳ್ಳು ಹೇಳಿ, ಮಾಧ್ಯಮದವರು ಇಮೇಜನ್ನು ಹಾಳು ಮಾಡಿಕೊಳ್ಳಲು ಹೋಗಬೇಡಿ. ಮಾಜಿ ಶಾಸಕ ಫಿರೋಜ್ ಸೇಠ್ ನಿವಾಸಕ್ಕೆ ಹೋಗಿದ್ದನ್ನು ಬೇರೆಯ ಬಿಂಬಿಸಲಾಗಿದೆ. ಫಿರೋಜ್ ಸೇಠ್ ಕಾಂಗ್ರೆಸನ ಹಿರಿಯ ನಾಯಕರು. ಅವರನ್ನು ಕೇವಲ ಸಂಘಟನೆಯ ದೃಷ್ಟಿಯಿಂದ ಅವರನ್ನು ಭೇಟಿಯಾಗಿರುವುದಾಗಿ ತಿಳಿಸಿದರು.

ಕಾಂಗ್ರೆಸನ 60 ಶಾಸಕರು ಬಿಜೆಪಿ ಸೇರ್ಪಡೆ ಕುರಿತು ಯತ್ನಾಳ ನೀಡಿದ ಹೇಳಿಕೆ, ಡರ್ಟಿ ಪಾಲಿಟಿಕ್ಸ್ ಬಗ್ಗೆ ಮಾತನಾಡುವುದಿಲ್ಲ ಎಂದರು. ಸುಳ್ಳಿನ ಕಂತೆಯನ್ನು ಬಿಚ್ಚಿಡುತ್ತಿದ್ದಾರೆ. ತ್ಯಾಗ ಹೋರಾಟದ ಮೂಲಕ ಕಾಂಗ್ರೆಸನ್ನು ಅಧಿಕಾರಕ್ಕೆ ತಂದಿದ್ದೇವೆ. ಕಾಂಗ್ರೆಸ್ ಬಾವಿಯ ನೀರನ್ನು ಚೆಲ್ಲಿ ಸ್ವಚ್ಛಗೊಳಿಸಿ ಇಲ್ಲಿಂದಲೇ ಮನೆಯನ್ನು ಬೆಳಗಿದ್ದೇವೆ ಎಂದರು.

ಕಾಂಗ್ರೆಸನಲ್ಲಿ ಯಾವುದೇ ಬಂಡಾಯ ಅಥವಾ ವೈಮನಸ್ಸು ಇಲ್ಲ. ಎಲ್ಲರೂ ಒಂದಾಗಿದ್ದೇವೆ ಎಂದರು. ಕಾರ್ಯಕರ್ತರು ರಕ್ಷಣೆ – ಪಕ್ಷದ ಏಳ್ಗೆ ಮಾತ್ರ ನನ್ನ ಜವಾಬ್ದಾರಿ ಮಿಕ್ಕಿದಕ್ಕೆ ನನ್ನ ಹೆಸರನ್ನು ಉಪಯೋಗಿಸಿಕೊಳ್ಳಬೇಡಿ ಎಂದು ಖಡಾಖಂಡಿತವಾಗಿ ನುಡಿದರು.

ಗಾಂಧಿ ಭಾರತ ಕಾರ್ಯಕ್ರಮಕ್ಕೆ ಹೊರಗಿನಿಂದ 60 ಜನ ಅತಿಥಿಗಳು ಆಗಮಿಸುತ್ತಿದ್ದಾರೆ. ಸಚಿವರು, ಶಾಸಕರು ಮತ್ತು ಹಿರಿಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಲೋಕಸಭಾ ಸದಸ್ಯರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮ ಮಹಾತ್ಮಾ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರರ ಸ್ಮರಣೆಗೆ ಮತ್ತು ಸಂವಿಧಾನದ ರಕ್ಷಣೆಗಾಗಿ ನಡೆಯಲಿದೆ. ಮಹಾತ್ಮಾ ಗಾಂಧಿಜೀಯವರ ಆದರ್ಶಗಳು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯಕ್ಕಾಗಿ ನೀಡಿದ ಮಾರ್ಗದರ್ಶನವನ್ನು ಎತ್ತಿ ಹಿಡಿದು ಸಂವಿಧಾನವನ್ನು ರಕ್ಷಿಸುವುದೇ ನಮ್ಮ ಮೂಲಮಂತ್ರವಾಗಿದೆ ಎಂದರು.

ಇನ್ನು ಸುವರ್ಣಸೌಧದ ಎದುರಿಗೆ ಮಹಾತ್ಮಾ ಗಾಂಧಿಜೀಯವರ ಮೂರ್ತಿಕಾರರ ಹೆಸರನ್ನು ಬಹಿರಂಗ ಪಡಿಸಲಾಗುವುದಿಲ್ಲ ಎಂದರು. ಇನ್ನು ದೆಹಲಿ ಸ್ಟಾರ್ ಪ್ರಚಾರಕರಲ್ಲಿ ತಮ್ಮ ಹೆಸರಿದ್ದು, 2500 ರೂಪಾಯಿ ಪ್ಯಾರಿ ದೀದೀ ಯೋಜನೆಯನ್ನು ಜಾರಿ ಮಾಡಿದ್ದೇನೆ. ರಾಜ್ಯ ಬಜೆಟನ ಪೂರ್ವ ತಯಾರಿಯಲ್ಲಿ ತೊಡಗಿರುವುದರಿಂದ ಸಿಎಂ ಸಿದ್ಧರಾಮಯ್ಯನವರ ಹೆಸರು ಸ್ಟಾರ್ ಪ್ರಚಾರಕರ ಸೂಚಿಯಲ್ಲಿಲ್ಲ ಎಂದು ಸ್ಪರ್ಷಪಡಿಸಿದರು.

Tags:

error: Content is protected !!