ರಾಜ್ಯದಲ್ಲಿ ಜನರು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಊರು ಬಿಟ್ಟು ಹೋಗೋದು ಒಂದೆಡೆಯಾದ್ರೆ ಕೆಲವು ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ,ಹೀಗಾಗಿ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೇ ಅಂಕುಶ ಹೇರಲು ಮುಂದಾಗಿದೆ,ಆದ್ರೆ ಇಲ್ಲೆದರ ನಡುವೆ ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾನೆ.
ಹೀಗೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿರೋ ಈತನ ಹೆಸರು ಮಾಬಲಿ ಅಂತಾ ಕಮರಿಪೇಟ್ ನಿವಾಸಿ ಈತ ಕಳೆದ 4 ವರ್ಷಗಳ ಹಿಂದೆ ವಿವಿಧ ಪೈನಾನ್ಸ್ ನಲ್ಲಿ ಸಾಲವನ್ನು ಮಾಡಿದ್ದ,ಅದೇ ರೀತಿ ಸಾಲವನ್ನು ತೀರಿಸಿಕೊಂಡು ಬರುತ್ತಿದ್ದ ಆದ್ರೆ ಕಳೆದ ಮೂರು ತಿಂಗಳಿಂದ ಅನಾನುಕೂಲ ಆಗಿ ಸಾಲ ಮರುಪಾವತಿ ಮಾಡಲು ಆಗಿದ್ದಿಲ್ಲ,ಹೀಗಾಗಿ ಪೈನಾನ್ಸ್ ನವರು ನಮಗೆ ದುಡ್ಡು ಬೇಕೇ ಬೇಕು ಎಂದು ಮನೆಗೆ ಬಂದು ಕಿರುಕುಳ ಕೊಡಲು ಶುರು ಮಾಡಿದ ಬೆನ್ನಲ್ಲೇ ಮಾಬುಲಿ ಬುಧವಾರ ಸಂಜೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕಿಮ್ಸ್ ಆಸ್ಪತ್ರೆ ಹಾಗೂ ಮಾಬುಲಿ ಮನೆಗೆ ಭೇಟಿ ನೀಡಿದ ಕಮಿಷನರ್ ಎನ್ ಶಶಿಕುಮಾರ್ ಕುಟುಂಬದವರಿಂದ ಮಾಹಿತಿ ಪಡೆದಿದ್ದಾರೆ,ಅಷ್ಟೇ ಅಲ್ಲದೇ ಕಿರುಕುಳ ಕೊಡುತ್ತಿದ್ದ ಪೈನಾನ್ಸ್ ಮೇಲೆ ಕಮರಿಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ರಾಜ್ಯದಲ್ಲಿ ಪೈನಾನ್ಸ್ ಕಿರುಕುಳಕ್ಕೆ ಸಾಲು ಸಾಲು ಆತ್ಮಹತ್ಯೆಗಳು ನಡೆಯುತ್ತಿದ್ದು ಮೈಕ್ರೋ ಪೈನಾನ್ಸ್ ಗಳಿಗೆ ಕಡಿವಾಣ ಹಾಕುವಂತೆ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿ ಹಾಗೂ SP ಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಶಶಿಕುಮಾರ್ ನೇತೃತ್ವದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿ ಮುಖ್ಯಸ್ಥರ ಜೊತೆ ಮೀಟಿಂಗ್ ನಡೆಸಿದ್ದು ಜನರ ಜೀವದ ಜೊತೆ ಆಟ ಆಡುವ ಪೈನಾನ್ಸ್ ಗಳಿಗೆ ಯಾವ ರೀತಿಯಾದ ಅಂಕುಶ ಹಾಕ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.