ನಾವು ನಕಲಿ ಗಾಂಧಿಗಳಾದರೇ ಅವರೇನು ಅಸಲಿ ಗಾಂಧಿಗಳಾ? ಬಿಜೆಪಿಗರು ಗಾಂಧಿಜೀಯನ್ನೇ ಒಪ್ಪಲ್ಲ. ಪಿಎಂ ಮೋದಿ ಖೇಲೋ ಇಂಡಿಯಾಗೆ ಕೇವಲ 1200 ಕೋಟಿ ನೀಡಿ, 6500 ಕೋಟಿ ಪ್ರಚಾರಕ್ಕೆ ಬಳಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಈ ಕುರಿತು ಚರ್ಚಿಸಲಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಸವಾಲು ಹಾಕಿದ್ದಾರೆ.

ಬಿಜೆಪಿಗರ ನಕಲಿ ಗಾಂಧಿಗಳಿಂದ ನಕಲಿ ಸಮಾವೇಶ, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬ ಟೀಕೆ ತಿರುಗೇಟು ನೀಡಿದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ ತಿರುಗೇಟು ನೀಡಿದ ಸಚಿವ ಸಂತೋಷ ಲಾಡ್ ನಾವು ನಕಲಿ ಗಾಂಧಿಗಳಾದರೇ ಅವರೇನು ಅಸಲಿ ಗಾಂಧಿಗಳಾ? ಅವರು ಗಾಂಧಿಜೀಯನ್ನೇ ಒಪ್ಪಲ್ಲ ಎಂದರು. ಕಾಂಗ್ರೆಸ್ ಸರ್ಕಾರವಿರುವೆಡೆಯೆಲ್ಲ ಕಾರ್ಯಕ್ರಮವನ್ನು ಟೀಕಿಸುವುದೇ ಬಿಜೆಪಿಗರ ಕೆಲಸವಾಗಿದೆ. ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ ಎಂದರು. 6500 ಕೋಟಿ ರೂಪಾಯಿಯನ್ನು ಪ್ರಧಾನಿ ಮೋದಿ ಸರ್ಕಾರ ಕೇವಲ ಪ್ರಚಾರಕ್ಕಾಗಿ ವ್ಯಯಿಸಿದೆ. ಖೇಲೋ ಇಂಡಿಯಾಗೆ ನೀಡಿದ್ದು, ಕೇವಲ 1200 ಕೋಟಿ. ಈ ಖರ್ಚಿನ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ಚರ್ಚೆ ಮಾಡುತ್ತಾರಾ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ನಡೆದ ದರೋಡೆ ಪ್ರಕರಣಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಇಂತಹ ಪ್ರಕರಣಗಳನ್ನು ಖಂಡಿಸುತ್ತದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ತಡೆಗಟ್ಟುತ್ತದೆ ಎಂದರು