Belagavi

ಸಾರ್ವಜನಿಕ ವಾಚನಾಲಯದಿಂದ ಪತ್ರಕರ್ತ ಪುರಸ್ಕಾರ ಪ್ರಶಸ್ತಿ ಘೋಷಣೆ…

Share

ಬೆಳಗಾವಿಯ ಸಾರ್ವಜನಿಕ ವಾಚನಾಲಯದಿಂದ ಕೊಡಮಾಡುವ ಪತ್ರಕರ್ತ ಪುರಸ್ಕಾರ ಪ್ರಶಸ್ತಿ ಘೋಷಣೆಯಾಗಿದ್ದು, ನಮ್ಮ ಇನ್ ನ್ಯೂಸ್ ಮರಾಠಿಯ ಉಪ ಸಂಪಾದಕಿ ನೀಲಿಮಾ ಲೋಹಾರ್ ಸೇರಿದಂತೆ ಹಲವರು ಆಯ್ಕೆಯಾಗಿದ್ದಾರೆ

ಬೆಳಗಾವಿಯ ಸಾರ್ವಜನಿಕ ವಾಚನಾಲಯದಿಂದ ಕೊಡಮಾಡುವ ಪತ್ರಕರ್ತ ಪುರಸ್ಕಾರ ಪ್ರಶಸ್ತಿ ಘೋಷಣೆಯಾಗಿದ್ದು, ಮರಾಠಿ ವಿಭಾಗದಲ್ಲಿ ಪುಢಾರಿ ಪತ್ರಿಕೆಯ ಉಪಸಂಪಾದಕ ಸಂಜಯ್ ಸೂರ್ಯವಂಶಿ ಯವರಿಗೆ ಕನ್ನಡ ವಿಭಾಗದಲ್ಲಿ ನ್ಯೂಸ್ 18 ಬೆಳಗಾವಿ ಜಿಲ್ಲಾ ವಿಶೇಷ ವರದಿಗಾರ ಚಂದ್ರಕಾಂತ್ ಸುಗಂಧಿಯವರಿಗೆ 2024 ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರೋ ಎಸ್ ಆರ್ ಜೋಗ್ ಮಹಿಳಾ ಪತ್ರಕರ್ತರ ಪ್ರಶಸ್ತಿಗೆ ನಮ್ಮ ಇನ್ ನ್ಯೂಸ್ ಮರಾಠಿ ಚಾನೆಲ್‌ನ ಉಪಸಂಪಾದಕಿ ನೀಲಿಮಾ ಲೋಹಾರ್ ಹಾಗೂ ಕನ್ನಡ ವಿಭಾಗದಲ್ಲಿ ಕನ್ನಡಮ್ಮ ವಾರ್ತಾವಾಹಿನಿಯ ಆ್ಯಂಕರ್ ಲಾವಣ್ಯ ಅಪ್ಪಯ್ಯ ಅನಿಗೊಳ್ ಆಯ್ಕೆಯಾಗಿದ್ದಾರೆ ಎಂದು ಸಾರ್ವಜನಿಕ ವಾಚನಾಲಯ ಬೆಳಗಾವಿ ಪ್ರಕಟಣೆ ಹೊರಡಿಸಿದೆ

ಶನಿವಾರ ಜನವರಿ 18ರಂದು ಸಂಜೆ 5.30ಕ್ಕೆ ACPR ಸಭಾಗೃಹ, ಗುರುದೇವ ರಾನಡೆ ಮಂದಿರ ಹಿಂದವಾಡಿ ಬೆಳಗಾವಿಯಲ್ಲಿ ನೆರವೇರಲಿದೆ.

Tags:

error: Content is protected !!