Belagavi

ಬೆಳಗಾವಿಯ ಮಲ್ಲಿಕಾರ್ಜುನ ನಗರದಲ್ಲಿ ಅಯೋಧ್ಯಾ ರಾಮ ಮಂದಿರದ ವಾರ್ಷಿಕೋತ್ಸವ…

Share

ಬೆಳಗಾವಿಯ ಮಲ್ಲಿಕಾರ್ಜುನ ನಗರದಲ್ಲಿ ಅಯೋಧ್ಯಾ ರಾಮಮಂದಿರದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ಜನವರಿ 22 , 2025ಕ್ಕೆ ಅಯೋಧ್ಯೆಯ ರಾಮಮಂದಿರ ನಿರ್ಮಾಣವಾಗಿ ಒಂದು ವರ್ಷ ಕಳೆದ ಹಿನ್ನೆಲೆ ಬೆಳಗಾವಿಯ ಮಲ್ಲಿಕಾರ್ಜುನ ನಗರದಲ್ಲಿ ಅಯೋಧ್ಯಾ ರಾಮಮಂದಿರದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜಸೇವೆ ಹಿನ್ನೆಲೆ ಸಮಾಜಸೇವಕ ವಿನೋದ ಭಾಗವತರ ಮತ್ತು ಶ್ರೀ ಬಸವೇಶ್ವರ ಕೋ-ಆಪರೇಟ್ಹಿವ್ ಬ್ಯಾಂಕಿನ ಸದಸ್ಯರಾಗಿ ಆಯ್ಕೆಯಾದ ಅಡ್ವೋಕೇಟ್ ಸಚೀನ್ ಶಿವಣ್ಣನವರ ಅವರನ್ನು ಸತ್ಕರಿಸಲಾಯಿತು. ಈ ವೇಳೆ ಉಪಸ್ಥಿತ ಗಣ್ಯರು ರಾಮಮಂದಿರದ ಇತಿಹಾಸವನ್ನು ತಿಳಿದರು.

ಈ ವೇಳೆ ಉಮೇಶ್ ಬಾಗೇವಾಡಿ, ನಾಗರಾಜ್ ದಳವಾಯಿ, ವಿನಾಯಕ ಮಾಶೀಕರ, ರಾಜು ಖಾಡೆ, ರಾಕೇಶ್ ಮಠಪತಿ, ನೀತಿನ್ ಪಾಟೀಲ್, ರಾಹುಲ್ ಪಾಟೀಲ್, ರಾಮಪ್ಪ ಶಿವಣ್ಣವರ, ಮಹೇಶ್ ಶಿವಣ್ಣವರ ಸೇರಿದಂತೆ ಮಹಾಲಕ್ಷ್ಮೀ ಮಹಿಳಾ ಮಂಡಳದ ಸದಸ್ಯೆಯರು ಭಾಗಿಯಾಗಿದ್ಧರು.

Tags:

error: Content is protected !!