ಖಾನಾಪೂರ ತಾಲೂಕಿನ ನೊಂದು ಬಂದ ಸಮಸ್ಯೆ ನಿವಾರಣೆಗೆ ಸ್ಪಂದಿಸುವ ಕಾರ್ಯ ಮಾಡಿದ ಎಐಸಿಸಿ ಕಾರ್ಯದರ್ಶಿ ಮಾಜಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಹಂತ ಹಂತವಾಗಿ ಎಲ್ಲರ ಸಮಸ್ಯೆಗಳನ್ನು ಕೇಳಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡರು.

ಎಐಸಿಸಿ ಕಾರ್ಯದರ್ಶಿಗಳಾಗಿ ನೇಮಕಗೊಂಡ ನಂತರ ಅವರು ಗೋವಾ ಸೇರಿದಂತೆ ಇನ್ನಿತರ ರಾಜ್ಯದ ಉಸ್ತುವಾರಿಯನ್ನು ಕೂಡಾ ಹೊಂದಿರುವ ಹಿನ್ನೆಲೆಯಲ್ಲಿ ಎಐಸಿಸಿ ಸಮಿತಿಯೂ ನೀಡಿದ ಜವಾಬ್ದಾರಿ ಮುಗಿಸಿಕೊಂಡು ಬಂದ ತತಕ್ಷಣವೆ ನೊಂದು ಬಂದ ಸಾರ್ವಜನಿಕರ ಸಮಸ್ಯೆಗಳನ್ನು ಡಾ. ಅಂಜಲಿ ನಿಂಬಾಳ್ಕರ್ ಆಲಿಸಿದರು.ಜನಸಾಮಾನ್ಯರ ಸೇವೆಗೆ ಯಾವುದೇ ಅಧಿಕಾರದಲ್ಲಿ ಇರುವುದು ಮುಖ್ಯವಲ್ಲ ಜನಸಾಮಾನ್ಯರ ಜೊತೆ ಇರುವುದು ಮುಖ್ಯ ಎಂದು ಸಾರ್ವಜನಿಕ ವಲಯದಲ್ಲಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರ ಬಗ್ಗೆ ಚರ್ಚೆ ಆಗುತ್ತಿದೆ.