ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ, ಹಾಸ್ಯ ನಟ ಸಾಧು ಕೋಕಿಲ ಅವರು ಇಂದು ಬೆಳಗಾವಿಗೆ ಆಗಮಿಸಿ ಕಾರ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಗ್ಯವನ್ನು ವಿಚಾರಿಸಿದರು.

ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಇನ್ನು ಸ್ವಲ್ಪ ವಿಶ್ರಾಂತಿಯ ಅವಶ್ಯಕತೆಯಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತುಂಬಾ ಆತ್ಮಿಯರು. ಬೇಗಣೆ ಗುಣಮುಖರಾಗಿ ಮತ್ತೇ ಜನಸೇವೆಯನ್ನು ಮಾಡುವಂತಾಗಲಿ. ಮುಂಬರುವ ತಿಂಗಳು ಅವರ ಹುಟ್ಟುಹಬ್ಬವಿದ್ದು, ಅವರಿಗಾಗಿ ಒಂದು ಅದ್ಧೂರಿ ಕಾರ್ಯಕ್ರಮವನ್ನು ಮಾಡಿ ವಿಶೇಷ ಗಿಫ್ಟ್ ನೀಡಲಾಗುವುದು ಎಂದರು. ಬೈಟ್
ಇನ್ನು ಗಾಂಧಿ ಭಾರತ ಸಮಾವೇಶದ ಕುರಿತು ಮಾತನಾಡಿದ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಮಾವೇಶ ಯಶಸ್ವಿಯಾಗಿದೆ. ಗಾಂಧಿಜೀಯವರ ತತ್ವಾದರ್ಶಗಳ ಪಾಲನೆಯಾಗಬೇಕು. ಮತ್ತೊಮ್ಮೆ ಗಾಂಧಿ ಭಾರತ ನಿರ್ಮಾಣವಾಗಬೇಕು. ಡಾ. ಬಾಬಾಸಾಹೇಬ್ ಅಂಬೇಡ್ಕರರು ಬರೆದಿರುವ ಸಂವಿಧಾನವನ್ನು ರಕ್ಷಿಸುವ ಕೆಲಸಗಳಾಗಬೇಕು ಎಂದರು.