Belagavi

ವಿನಾಕಾರಣ ಕಿರುಕುಳ ನೀಡಿದ್ರೇ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮ; ಸಚಿವ ಸತೀಶ ಜಾರಕಿಹೊಳಿ

Share

ಫೈನಾನ್ಸ್ ಕಂಪನಿಯವರು ಸಾರ್ವಜನಿಕರಿಗೆ ವಿನಾಕಾರಣ ಕಿರುಕುಳ ನೀಡಿದಾಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಶುಕ್ರವಾರ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಯಾರಿಗೂ ಕಿರುಕುಳ ನೀಡದಂತೆ ಸೂಚನೆ ಸಹ ನೀಡಲಾಗಿದೆ. ಎರಡೂ ತಿಂಗಳು ಕಾಲಾವಕಾಶ ಕೊಡಿ ಎಂದು ಹೇಳಲಾಗಿದೆ ಎಂದರು.
ಫೈನಾನ್ಸ್ ದವರ ಕಾಟಕ್ಕೆ ಶಿರೂರ್ ಗ್ರಾಮದಲ್ಲಿಯೂ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ದೂರು ಕೊಟ್ಟರೆ ಕ್ರಮ ಜರುಗಿಸಲಾಗುವುದು. ಕಷ್ಟ ಕಾಲಕ್ಕೆ ಕೈ ಸಾಲ ತೆಗೆದುಕೊಂಡಿರುತ್ತಾರೆ. ಮೈಕ್ರೋ ಫೈನಾನ್ಸ್ ದವರು ಸಹ ನ್ಯಾಯಾಲಯದ ಆದೇಶ ತೆಗೆದುಕೊಂಡು ಬಂದೆ ಹಣ ವಸೂಲಿ ಮಾಡಲು ಹೋಗಿರುತ್ತಾರೆ. ಕಿರುಕುಳ ನೀಡಿದರೆ ಕ್ರಮ ಎಂದರು.

Tags:

error: Content is protected !!