ಬಡ್ಡಿ ಕಿರುಕುಳ ತಾಳಲಾರದೆ ಹುಬ್ಬಳ್ಳಿಯಲ್ಲಿ ಯುವಕ ಡೆಥ್ ನೋಟ್ ಬರೆದಿಟ್ಟು ಅಪಘಾತ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹುಬ್ಬಳ್ಳಿ ಉಣಕಲ್ ನಿವಾಸಿ ಸಿದ್ದು ಕೆಂಚಣ್ಣವರ ಎಂಬ ಯುವಕ ತನ್ನ ಸ್ನೇಹಿತ ಹತ್ತಿರ 10 ಲಕ್ಷ ಸಾಲ ಮಾಡಿಕೊಂಡಿದ್ದ ಪಡೆದ ಸಾಲಕ್ಕೆ 65 ಲಕ್ಷ ಹಣ ಬಡ್ಡಿ ಕಟ್ಟಿದ್ದ ಆದರೂ ಬಡ್ಡಿ ನೀಡುವಂತೆ ಆತನ ಸ್ನೇಹಿತ ಮಹೇಶ್ ಕಿರುಕುಳ ನೀಡುತ್ತಿದ್ದ ಇದರಿಂದ ಬೇಸತ್ತ ಸಿದ್ದು ನಿನ್ನಿ ಡೆಥ್ ನೋಟ್ ಬರೆದಿಟ್ಟು ತನ್ನ ವಾಟ್ಸಾಪ್ ಸ್ಟೇಟ್ಸ್ ಹಾಕಿ ಮನೆಯಿಂದ ಹೋದ ಸಿದ್ದು ಹುಬ್ಬಳ್ಳಿ ಹೊರವಲಯ ತಾರಿಹಾಳ ಬಳಿ ಲಾರಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿ ಕೊಂಡಿದ್ದಾನೆ. ಸಿದ್ದು ಗೆ ಕಿರುಕುಳ ಕೊಟ್ಟ ಮಹೇಶ್ ಚಿಕ್ಕ ವೀರಮಠರನ್ನು ಗೋಕುಲ್ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.