ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತ ನೋರ್ವನಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದ್ದರಿಂದ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಚನ್ನಮ್ಮನ ಕಿತ್ತೂರಿನಲ್ಲಿ ನಡೆದಿದೆ.

ಚೆನ್ನಮ್ಮನ ಕಿತ್ತೂರು ತಾಲೂಕಿನ ಕುಲವಳ್ಳಿ ಸೇರಿದಂತೆ 9 ಗ್ರಾಮಗಳ ರೈತರು ಸಾಗುವಳಿ ಭೂಮಿಯ ಹಕ್ಕು ಪತ್ರ ಕೊಡಬೇಕೆಂದು ಆಗ್ರಹಿಸಿ ಕಳೆದ ಹತ್ತು ದಿನಗಳಿಂದ ತಹಶೀಲ್ದಾರ ಕಚೇರಿ ಎದುರು ಅಹೋರಾತ್ರಿ ಅನಿರ್ದಿಷ್ಟ ಧರಣಿ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಆರಂಭದಿಂದಲೂ ಪಾಲ್ಗೊಂಡಿದ್ದ ಕತ್ರಿದಡ್ಡಿ ಗ್ರಾಮದ ರೈತ ತಿಪ್ಪಣ್ಣ ಕಣಗಾವಿಗೆ ಇಂದು ಏಕಾಏಕಿ ಎದೆ ನೋವು ಕಾಣಿಸಿಕೊಂಡು ಅಸ್ವಸ್ಥ ಗೊಂಡಿದ್ದರಿಂದ ಸಹ ಪ್ರತಿಭಟಣಾಕಾರರು ತಕ್ಷಣವೇ ಅಂಬ್ಯೂಲೆನ್ಸ್ ಮೂಲಕ ಕಿತ್ತೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ