Accident

ಕಾರ್ ಬೈಕ್ ನಡುವೆ ಡಿಕ್ಕಿ, ಬೈಕ ಸವಾರ ಸಾವು..ಅಳ್ನಾವಾರ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ.

Share

ಕಾರ್ ಹಾಗೂ ಬೈಕ್ ನಡುವೆ ಡಿಕ್ಕಿ‌ಸಂಭವಿಸಿದ ಪರಿಣಾಮ ಬೈಕ್ ಸಾವಾರ ದಾರುಣವಾಗಿ ಸಾವನಪ್ಪಿರುವ ಘಟನೆ ಅಳ್ನಾವಾರ ತಾಲೂಕಿನ ಧಾರವಾಡ ಅಳ್ನಾವಾರ ರಸ್ತೆಯಲ್ಲಿ‌ಂದು ನಡೆದಿದೆ.‌

ಅಳ್ನಾವಾರ ನಿವಾಸಿ ಸಿದ್ದು ನಾಯಕ ಮೃತ ಬೈಕ್ ಸವಾರನಾಗಿದ್ದಾನೆ. ಬೈಕ್ ಸವಾರ ಅಳ್ನಾವಾರಕ್ಕೆ ತೆರಳುತ್ತಿದ್ದನಂತೆ, ಅಳ್ನಾವಾರದಿಂದ ಕಾರ್ ಧಾರವಾಡ ಕಡೆಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತದಿಂದ ಕಾರನಲ್ಲಿದವರಿಗೂ ಗಾಯವಾಗಿದ್ದು, ಸ್ಥಳೀಯರು ಗಾಯಾಳು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇನ್ನೂ ಅಪಘಾತವಾದ ಬೈಕ ರಸ್ತೆಯಲ್ಲಿ‌ ಮೇಲೆ ಬಿದ್ದರೆ, ಕಾರ್ ರಸ್ತೆಯ ಪಕ್ಕದ ಗಿಡಗಳ ಮಧ್ಯ ಸಿಲುಕೊಂಡು ಅಫಘಾತದ ಭೀಕರತೆ ತೋರೀಸುತ್ತದೆ.‌ ಸ್ಥಳೀಯರ‌ ಮಾಹಿತಿ ಘಟನಾ ಸ್ಥಳಕ್ಕೆ ಅಳ್ನಾವಾರ ಠಾಣೆಯ ಪೊಲೀಸರು ಭೇಟಿ ನೀಡಿ‌ಪ್ರಕರಣ ದಾಖಲುಸಿಕೊಂಡು ತನಿಖೆ ಕೈಗೊಂಡಿದ್ದಾರೆ.‌

Tags:

error: Content is protected !!