ಬೆಳಗಾವಿಯ ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದ ಪ್ರಮೋದ ಕುಪ್ಪಿ ಅವರು ಹೃದಯಾಘಾತದಿಂದ ನಿಧನರಾಗಿದ್ದು, ಮರಣೋತ್ತರ ನೇತ್ರದಾನವನ್ನು ಮಾಡಿದ್ದಾರೆ.

ಬೆಳಗಾವಿಯ ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದ ಪ್ರಮೋದ ಕುಪ್ಪಿ ಅವರು ಬುಧವಾರ ಹೃದಯಾಘಾತದಿಂದ ನಿಧನರಾದರು. ಇವರ ನೇತ್ರಗಳನ್ನು ಕುಟುಂಬಸ್ಥರು ದಾನ ಮಾಡಿ ಸಾವಿನಲ್ಲಿಯೂ ಮಾನವೀಯತೆ ಮೆರೆದಿದ್ದಾರೆ.ಪ್ರಮೋದ್ ಅವರ ನೇತ್ರಗಳನ್ನು ಡಾ. ಮಹಾಂತೇಶ ರಾಮಣ್ಣವರ ಸಹಯೋಗದಲ್ಲಿ ಕೆಎಲ್ಇ ಆಸ್ಪತ್ರೆಗೆ ದಾನ ಮಾಡಿದ್ದಾರೆ.