ವಿವಾಹಿತ ಮಹಿಳೆ ಜೊತೆಗೆ ಮಾತನಾಡಿದ್ದಕ್ಕೆ ಬೆತ್ತಲೆಯಾಗಿ ಥಳಿತ ಹಲ್ಲೆ ಪ್ರಕರಣ, ಹುಬ್ಬಳ್ಳಿಯ ಕಸಬಾಪೇಟ ಪೊಲೀಸರಿಂದ 9 ಜನರ ಬಂಧನ ಮಾಡಲಾಗಿದೆ ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.

ನಿನ್ನೆ ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಮುಜಾಫೀರ್ ಅನ್ನೋ ಯುವಕನಿಗೆ 9 ಜನರ ತಂಡ ಥಳಿಸಿದ್ದ
ವಿವಾಹಿತ ಮಹಿಳೆ ಜೊತೆ ಮಾತನಾಡಿದ ಹಿನ್ನಲೆ ಥಳಿಸಲಾಗಿತ್ತು. ಕೆಲಸ ಮಾಡೋ ಜಾಗದಿಂದ ಅಪಹರಿಸಿ ಹಲ್ಲೆ ಮಾಡಿದ್ದರು.ಹಲ್ಲೆ ಮಾಡಿ ಟಿಪ್ಪು ನಗರದಲ್ಲಿ ಮುಜಾಫೀರ್ ನನ್ನ ಬ ಬಿಟ್ಟು ಹೋಗಿದ್ದರು.
ಇಂದು ಹಲ್ಲೆ ಮಾಡಿದ 9 ಜನರನ್ನ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಕೃತ್ಯಕ್ಕೆ ಬಳಸಿದ ಒಂದು ಆಟೋ, ಎರಡು ಬೈಕ್ ವಶಕ್ಕೆ ಪಡೆದು.
ಮಹ್ಮದ್ ಅಲಿ, ಮಲ್ಲಿಕ್, ಮಾಬುಬ್ ಅಲಿ, ಇಸ್ಮಾಯಿಲ್, ನದೀಮ್, ಖಾಜಾಮೈನುದ್ದಿನ್, ಎಂಡಿ ಸಾದೀಕ್, ಜುಬೇರ್, ಎಂಡಿ ಇರ್ಫಾನ್ ಎನ್ನುವವರ ಬಂಧನ ಮಾಡಲಾಗಿದೆ.
ಇನ್ನು ಹಲ್ಲೆಗೊಳಗಾದ ಮುಜಾಫೀರ್ ಮಹಿಳೆ ಜೊತೆ ಅನುಚಿತ ವರ್ತನೆ ಹಿನ್ನಲೆ ಅವನನ್ನು ಕೂಡಾ ಬಂಧನ
ಮಾಡಲಾಗಿದ್ದು. ಎರಡು ಕಡೆ ದೂರು ಪ್ರತಿದೂರು ದಾಖಲಾದ ಹಿನ್ನಲೆ ಮುಜಾಫೀರ್ ಕೂಡಾ ಬಂಧನ ಮಾಡಿ ತನಿಖೆ ಮಾಡಲಗುತ್ತಿದೆ.