ಹುಕ್ಕೇರಿ ನಗರದಲ್ಲಿ 76 ನೇ ಗಣರಾಜ್ಯೋತ್ಸವ ಅದ್ದೂರಿಯಾಗ ಆಚರಿಸಲಾಯಿತು ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ ದ್ವಜಾರೋಹಣ ಜರುಗಿಸಿ ಸಿಬ್ಬಂದಿಗಳಿಗೆ ಶುಭಾಶಯ ಕೋರಿದರು.
ಆಡಳಿತ ಸೌಧದಲ್ಲಿ ತಹಸಿಲ್ದಾರ ಮಂಜುಳಾ ನಾಯಿಕ ದ್ವಜಾರೋಹಣ ಜರುಗಿಸಿದರೆ, ಶಾಸಕ ನಿಖಿಲ ಕತ್ತಿ ಹಳೆ ಬಸ್ ನಿಲ್ದಾಣದ ಆವರಣದಲ್ಲಿ ದ್ವಜಾರೋಹನ ನೆರವೇರಿಸಿದರು..
ನಂತರ ಎಸ್ ಕೆ ಹೈ ಸ್ಕೂಲ ಮೈದಾನದಲ್ಲಿ ಸಾರ್ವಜನಿಕ ದ್ವಜಾರೋಹನದಲ್ಲಿ ಭಾಗಿಯಾಗಿ ಮಾತನಾಡಿ ಬಾಬಾಸಾಹೇಬ ಅಂಬೇಡ್ಕರ ರವರ ರಚಿಸಿದ ಸಂವಿಧಾನ ಇಡಿ ಜಗತ್ತಿಗೆ ಮಾರ್ಗದರ್ಶನ ನೀಡಿದೆ ನಾವು ಅದರ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಸಾರ್ಕಾರದ ಯೋಜನೆ ತಲುಪಿಸುವಲ್ಲಿ ಯುವಕರು ಕಾರ್ಯನಿರ್ವಹಿಸಬೇಕಾಗಿದೆ ಅದರಂತೆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಲಾಗುತ್ತಿದೆ ಎಂದರು.
ನಂತರ ಪುರಸಭೆ ಆವರಣದಲ್ಲಿ ಅದ್ಯಕ್ಷ ಇಮ್ರಾನ ಮೋಮಿನ ದ್ವಜಾರೋಹನ ಜರುಗಿಸಿದರು ಹೋಸ ಬಸ್ ನಿಲ್ದಾಣದಲ್ಲಿ ಕಟ್ಟಡ ಮೇಲೆ ರಾಜು ಬಾಗಲಕೋಟಿ , ಹಾಗೂ ಟಿಪ್ಪು ಸುಲ್ತಾನ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ಜಿಲ್ಲಾ ಮುಸ್ಲಿಂ ಕಲ್ಯಾಣ ಹಾಗೂ ಶಿಕ್ಷಣ ಸಂಸ್ಥೆಗಳ ಅದ್ಯಕ್ಷ ಇಕ್ಬಾಲ್ ಪೀರಜಾದೆ ದ್ವಜಾರೋಹನ ಜರುಗಿಸಿ ಶಾಲಾ ವಿದ್ಯಾರ್ಥಿಗಳಿಂದ ಗೌರವ ರಕ್ಷೆ ಪಡೆದು ಪಥ ಸಂಚಲನ ವೀಕ್ಷಿಸಿದರು.
ನಂತರ ತಾಲೂಕಾ ದಂಡಾಧಿಕಾರಿ ಮಂಜುಳಾ ನಾಯಿಕ ಮಾದ್ಯಮಗಳೊಂದಿಗೆ ಮಾತನಾಡಿ ಡಾ, ಬಾಬಾಸಾಹೇಬ ಅಂಬೇಡ್ಕರ ರವರು ರಚಿಸಿದ ಸಂವಿಧಾನ ಇಡಿ ಜಗತ್ತಿಗೆ ಮಾದರಿಯಾಗಿದೆ 1947 ರಲ್ಲಿ ಸ್ವಾತಂತ್ರ ಲಭಿಸಿದ ನಂತರ ಅಂಬೇಡ್ಕರವರ ಅದ್ಯಕ್ಷತೆಯಲ್ಲಿ ರಚಿಸಿದ ಸಂವಿಧಾನ ಎಲ್ಲ ಜನಾಂಗದ ಜನರಿಗೆ ನ್ಯಾಯ ದೋರಕಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಕನ್ಮಡ ಸಾಹಿತ್ಯ ಪರಿಷತ್ ಸದಸ್ಯರು, ಗಣ್ಯರು, ದೇಶಾಭೀಮಾನಿಗಳು ಉಪಸ್ಥಿತರಿದ್ದರು.