ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ 40ನೇ ಕಡೋಲಿ ಮರಾಠಿ ಸಾಹಿತ್ಯ ಸಮ್ಮೇಳನ ನಡೆಯಿತು. ಗ್ರಂಥ ದಿಂಡಿ ಮತ್ತು ವಿವಿಧ ಸತ್ರಗಳಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.
ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ 40ನೇ ಕಡೋಲಿ ಮರಾಠಿ ಸಾಹಿತ್ಯ ಸಮ್ಮೇಳನ ನಡೆಯಿತು. ಬೆಳಿಗ್ಗೆ ಶ್ರೀ ಜ್ಯೋತಿರ್ಲಿಂಗ ಮಂದಿರದಿಮದ ಗ್ರಂಥದಿಂಡಿ ನಡೆಸಲಾಯಿತು. ಇದರಲ್ಲಿ ವಾರಕರಿ, ಡೋಳತಾಶಾ, ಝಾಂಜ್ ಪಥಕ, ವಿದ್ಯಾರ್ಥಿಗಳು, ಸುಹಾಸಿನಿಯರು ಭಾಗಿಯಾಗಿದ್ದರು. ಚಿಕ್ಕ ಮಕ್ಕಳು ಛತ್ರಪತಿ ಶಿವಾಜೀ ಮಹಾರಾಜ್, ಸೇರಿದಂತೆ ಇನ್ನುಳಿದ ಮಹಾತ್ಮರ ವೇಷಧಾರಿ ಮಕ್ಕಳು ಎಲ್ಲರ ಗಮನ ಸೆಳೆದರು.
ಉಜ್ವಲಾ ಉಚ್ಚುಕರ ಅವರು ಪಲ್ಲಕ್ಕಿ ಪೂಜೆ ನಡೆಸಿದರು. ಶಿವಾಜೀರಾವ ಅತೀವಾಡಕರ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ಸುನೀಲ್ ಚೌಗುಲೆ, ಪ್ರಾಧ್ಯಾಪಕ ಶಶಿಕಾಂತ ಖೋರಾಟೆ ಇನ್ನುಳಿದ ಗಣ್ಯರು ಈ ವೇಳೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿದರು. ಶ್ರೀಕಾಂತ ಪಾಟೀಲ ಅವರು ಗ್ರಂಥ ಪ್ರದರ್ಶನಕ್ಕೆ ಚಾಲನೆಯನ್ನು ನೀಡಿದರು. ಮೋಹನ ಪುರಿ ಅವರು ಛತ್ರಪತಿ ಶಿವಾಜೀ ಮಹಾರಾಜರ ಮೂರ್ತಿಗೆ ಪೂಜೆಯನ್ನು ಸಲ್ಲಿಸಿದ್ದರು.ಪ್ರಾಧ್ಯಾಪಕ ಡಾ. ಪ್ರಲ್ಹಾದ ಲುಲೇಕರ ಅವರ ಅಧ್ಯಕ್ಷತೆಯಲ್ಲಿ ಮೊದಲ ಸತ್ರ ಆರಂಭಗೊಂಡಿತು. ಎರಡನೆ ಸತ್ರದಲ್ಲಿ ಕಾವ್ಯ ತರಂಗ ಕವಿ ಸಮ್ಮೇಳನ ಮತ್ತು ಮೂರನೇ ಸತ್ರದಲ್ಲಿ ಕಥಾಕಥನ ಸ್ಪರ್ಧೆ ಹಾಗೂ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಇನ್ನು ನಾಲ್ಕನೇ ಸತ್ರದಲ್ಲಿ ಆಹ್ವಾನಿ ಕವಿಗಳ ಸಮ್ಮೇಳನ ನಡೆಯಿತು.
5ನೇ ಡಾ. ಸಂಜೀವ್ ಮಾನೆ ಅವರ ಉಪನ್ಯಾಸ ಕಾರ್ಯಕ್ರಮ ನಡೆಯಿತು.