ಬೆಳಗಾವಿ ಜಿಲ್ಲಾ ದೇಹದಾರ್ಢ್ಯ ಸಂಘ, ಬೆಳಗಾವಿ ಸ್ಪೋರ್ಟ್ಸ್ ಕ್ಲಬ್, ರೋಟರಿ ಕ್ಲಬ್ ಆಫ್ ಬೆಲಗಾಮನ ಸಂಯುಕ್ತಾಶ್ರಯದಲ್ಲಿ ಮತ್ತು ಸತೀಶ ಜಾರಕಿಹೊಳಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ರಾಷ್ಟ್ರೀಯ ಪುರುಷ ಮತ್ತು ಮಹಿಳೆಯರ ದೇಹದಾರ್ಢ್ಯ ಸ್ಪರ್ಧೆ ಉತ್ಸಾಹದಲ್ಲಿ ನಡೆಯಿತು.

ಮುಖ್ಯ ಸುತ್ತಿನ ಸ್ಪರ್ಧೆ ಗುರುವಾರ ಸಂಜೆ ಅಂಗಡಿ ಕಾಲೇಜು ಆವರಣದಲ್ಲಿರುವ ಅನ್ನೋತ್ಸವ ಮೈದಾನದಲ್ಲಿ ಆರಂಭವಾಯಿತು. ಪ್ರತಿ ಗುಂಪಿನಿಂದ ಹತ್ತು ದೇಹದಾರ್ಢ್ಯ ಪಟುಗಳಲ್ಲಿ ಐವರನ್ನು ಆಯ್ಕೆ ಮಾಡಲಾಗಿದೆ. ಐವರು ಸ್ಪರ್ಧಿಗಳು ಮಾಡಿದ ಕಸರತ್ತನ್ನು ನೋಡಿದ ತೀರ್ಪುಗಾರರು ಕ್ರಮವಾಗಿ ಸಂಖ್ಯೆಗಳನ್ನು ಪ್ರಕಟಿಸಿದರು.65 ರಿಂದ 100 ಕೆ.ಜಿ ವಿಭಾಗದಲ್ಲಿ ವಿವಿಧ ಹಲವಾರು ಪಟುಗಳು ತಮ್ಮ ದೇಹದಾರ್ಢ್ಯವನ್ನು ಪ್ರದರ್ಶಿಸಿದರು.
65 ಕೆಜಿ ವಿಭಾಗದಲ್ಲಿ ಬೆಳಗಾವಿಯ ಪ್ರತಾಪ್ ಕಾಲಕಾಂದ್ರಿಕರಗೆ ಬೆಳ್ಳಿ ಪದಕ ಹಾಗೂ 75 ಕೆಜಿ ವಿಭಾಗದಲ್ಲಿ ಪ್ರಶಾಂತ ಖನ್ನೂಕರ್ ಅವರು ಬೆಳ್ಳಿ ಪದಕ ಪಡೆದರು.
ಇನ್ನು ಮಹಿಳೆಯರ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ಕಾಣ ಸಿಕ್ಕಿತು. ಒಬ್ಬರಿಗಿಂತ ಒಬ್ಬ ದೇಹದಾರ್ಢ್ಯಪಟುಗಳು ತಮ್ಮ ಫಿಟನೆಸನ್ನು ಪ್ರದರ್ಶಿಸಿ ಪರೀಕ್ಷಕರು ಮತ್ತು ಉಪಸ್ಥಿತರರ ಪ್ರಶಂಸೆಗೆ ಪಾತ್ರರಾದರು.
ಚಿಕ್ಕ ಮಕ್ಕಳ ಗುಂಪುನಲ್ಲಿಯೂ ಒಬ್ಬರಿಗಿಂತ ಒಬ್ಬ ಚಿಣ್ಣರು ತಮ್ಮ ಶರೀರಸೌಷ್ಠವವನ್ನು ಪ್ರದರ್ಶಿಸಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದರು.
ಗುಂಪಿನಲ್ಲಿ ಮೊದಲ ಐದು ರ ್ಯಾಂಕ್ ವಿಜೇತರಿಗೆ ಕ್ರಮವಾಗಿ 50,000, 40,000, 30,000, 25,000 ಮತ್ತು 20,000 ರೂಪಾಯಿ ಹಾಗೂ ಗಣ್ಯರಿಂದ ಪದಕ ನೀಡಿ ಗೌರವಿಸಲಾಯಿತು.ಯುವ ಮುಖಂಡ ರಾಹುಲ್ ಜಾರಕಿಹೊಳಿ, ಬಾಡಿಬಿಲ್ಡಿಂಗ್ ಫೆಡರೇಶನ್ ಆಫ್ ಇಂಡಿಯಾದ ಸಂಸ್ಥಾಪಕ ನಿರ್ದೇಶಕ ಮಧುಕರ್ ತಳವಲ್ಕರ್, ವರ್ಲ್ಡ್ ಬಾಡಿ ಬಿಲ್ಡಿಂಗ್ ಆ್ಯಂಡ್ ಫಿಸಿಕ್ ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿ ಚೇತನ್ ಪಠಾರೆ, ಬಾಡಿಬಿಲ್ಡಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಸ್ವಾಮಿ ರಮೇಶ್ ಕುಮಾರ್, ಅರ್ಜುನ ಪ್ರಶಸ್ತಿ ಪುರಸ್ಕೃತ ಟಿ. ವಿ. ಪಾಲಿ, ಮಾಜಿ ಪ್ರಾಂತೀಯ ಅವಿನಾಶ ಪೋತದಾರ, ಅಂತರಾಷ್ಟ್ರೀಯ ಅಂಪೈರ್ ಅಜಿತ್ ಸಿದ್ದಣ್ಣನವರ್, ಮಿಸ್ಟರ್ ಇಂಡಿಯಾ. ಭಾರತ ಸುನಿಲ್ ಆಪ್ಟೇಕರ್ ಬಹುಮಾನ ವಿತರಿಸಿದರು. ಪ್ರಾಂತಪಾಲರಾದ ಅವಿನಾಶ ಪೋತದಾರ, ಅಂತಾರಾಷ್ಟ್ರೀಯ ಅಂಪೈರ್ ಅಜಿತ್ ಸಿದ್ದಣ್ಣನವರ್, ಮಿಸ್ಟರ್ ಭಾರತ ಸುನಿಲ್ ಆಪ್ಟೇಕರ್, ಬೆಳಗಾವಿ ದೇಹದಾರ್ಢ್ಯ ಸಂಘದ ಅಧ್ಯಕ್ಷ ಎಂ ಗಂಗಾಧರ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.