Bailahongala

ಬೈಲಹೊಂಗಲನಲ್ಲಿ 30 ಅಡಿ ಎತ್ತರದ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ….

Share

ಹೋಟೆಲ್ ಮಾಲೀಕ ಮೂರು ತಿಂಗಳಿನಿಂದ ವೇತನ ನೀಡಲಿಲ್ಲ ಎಂದು ಕಾರ್ಮಿಕನೋರ್ವ 30 ಅಡಿ ಉದ್ದದ ಬ್ಯಾನರ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.

ಬೈಲಹೊಂಗಲ ಪಟ್ಟಣದ ಬಸ್ ನಿಲ್ದಾಣದ ಎದುರಿಗೆ ಇರುವ 30 ಅಡಿ ಎತ್ತರದ ಬ್ಯಾನರ್ ಕಂಬವನ್ನು ಯುವಕನೋರ್ವ ಏರಿ ತನ್ನ ಬಳಿ ಇದ್ದ ಬಟ್ಟೆಯನ್ನ ಸುತ್ತಿಕೊಂಡು ನೇಣು ಬಿಗಿದುಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ಕೂಡಲೆ ಅಲ್ಲೇ ಇದ್ದ ಆಟೋ ಚಾಲಕರು ಮೇಲೇರಿ ಆತನನ್ನ ರಕ್ಷಣೆ ಮಾಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವಕ ಬೈಲಹೊಂಗಲದ ಹೋಟೆಲೋಂದರಲ್ಲಿ ಕೆಲಸ ಮಾಡುತ್ತಿದ್ದ ಆದರೆ, ಕಳೆದ ಮೂರು ತಿಂಗಳಿನಿಂದ ಆತನಿಗೆ ಹೊಟೇಲ್ ಮಾಲೀಕ ವೇತನ ನೀಡದೆ ಸತಾಯಿಸುತ್ತಿದ್ದನಂತೆ. ಆದ್ದರಿಂದಲೇ ಇಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿದು ಬಂದಿದೆ.

ಬೈಲಹೊಂಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Tags:

error: Content is protected !!