ಮಾಜಿ ಸಚಿವ ಸಿಟಿ ರವಿ ಬಂಧನದ ಬಳಿಕ ಸಿ.ಟಿ. ರವಿಯವರನ್ನು ಬೆಳಗಾವಿ ಪೊಲೀಸರು ಬಂಧಿಸಿ ರಾತ್ರಿಯಿಡೀ ಸುತ್ತಾಡಿಸಿದಾಗ ಬಿಜೆಪಿ ಪಕ್ಷದ ಎಂಎಲ್ಸಿ ಕೇಶವ ಪ್ರಸಾದ್ ಅವರೊಂದಿಗಿದ್ದರು. ವಿಜಯಪುರ ನಗರದಲ್ಲಿ ಮಾದ್ಯಮಗೋಷ್ಠಿ ಮಾತನಾಡಿದ ಅವರು ಎಲ್ಲವನ್ನು ಸವಿಸ್ತಾರವಾಗಿ ಹೇಳಿದ್ದಾರೆ. ಪರಿಷತ್ ನಲ್ಲಿ ಸಭಾಪತಿ ಅವರು ರೂಲಿಂಗ್ ನೀಡಿದ ಬಳಿಕ ಕಾಂಗ್ರೆಸ್ನವರು ವಿಷಯವನ್ನು ಅಲ್ಲಿಗೆ ನಿಲ್ಲಿಸಬೇಕಿತ್ತು. ಅದರೆ ಉಪ ಮುಖ್ಯಮಂತ್ರಿ ಮತ್ತು ಉಳಿದ ಕಾಂಗ್ರೆಸ್ ಎಂಎಲ್ಸಿಗಳು ತಮ್ಮೆಲ್ಲರನ್ನು ಮತ್ತು ನಿರ್ದಿಷ್ಟವಾಗಿ ಸಿಟಿ ರವಿಯವರನ್ನು ಅರೆಸ್ಟ್ ಮಾಡಿಸುವ ನಿರ್ಧಾರ ಮಾಡಿಕೊಂಡಂತಿತ್ತು.
ಬಿಜೆಪಿ ಎಂಎಲ್ಸಿಗಳು ಸಭಾಪತಿಗಳಿಗೆ ದೂರನ್ನು ಸಲ್ಲಿಸಿ ಒಂದು ಚಿಕ್ಕ ಪ್ರತಿಭಟನೆ ನಡೆಸಿದ ಬಳಿಕ ಸಭಾತಿಯವರ ಅನುಮತಿ ಕೋರದೆ ರವಿಯವರನ್ನು ಬಂಧಿಸಲಾಯಿತು ಎಂದು ಕೇಶವ್ ಪ್ರಸಾದ್ ಹೇಳಿದರು. ಇನ್ನೂ ಪೊಲೀಸರ ವರ್ತನೆ ಬಗ್ಗೆ ಪ್ರತಿಕ್ರಿಯಿಸಿ ನಾನು ರಾತ್ರಿಯಿಡೀ ಹಿರೇಬಾಗೇವಾಡಿ ಯಿಂದ ಸಿಟಿ ರವಿ ಅವರ ಜೊತೆಗೇ ಇದ್ದೆ. ಆದರೆಅಲ್ಲಿಂದ ಬೆಂಗಳೂರಿಗೆ ಕರೆದೊಯ್ಯುತ್ತೇವೆ ಅಂತ ಪೋಲಿಸರು ಹೇಳಿದ್ರು. ಆದ್ರೆ ಹಾಗೆ ಮಾಡದೇ ಬೆಳಗಾವಿ ಜಿಲ್ಲೆಯ ಅಕ್ಕಪಕ್ಕದ ಬಾಗಲಕೋಟೆ, ವಿಜಯಪುರ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ರಾತ್ರಿಯಿಡೀ ಸುತ್ತಾಡಿಸಿದ್ದಾರೆ. ಕೊನೆಗೆ ಲೋಕಾಪೂರ ಯರಗಟ್ಟಿ ಮಾರ್ಗ ಮದ್ಯೆ ನನ್ನನ್ನು ಬೇರ್ಪಡಿಸಿ ಸಿಟಿ ರವಿ ಅವರನ್ನು ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಈ ವೇಳೆ ಅತ್ಯಂತ ದೊಡ್ಡ ಪೊಲೀಸ್ ಫೋರ್ಸ್ ಅಲ್ಲಿತ್ತು ಆತಂಕ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯರನ್ನು ಪೊಲೀಸರು ಈ ರೀತಿ ನಡೆಸಿಕೊಳ್ಳುತ್ತಾರೆಂದರೆ ಹೇಗೆ? ಸಿಟಿ ರವಿ ಅವರೇನು ಕೊಲೆಗಡುಕಲ್ಲ, ಭಯೋತ್ಪಾದಕರಲ್ಲ, ಅವರ ಬಳಿ ಬಾಂಬ್ಗಳೇನೂ ಪತ್ತೆಯಾಗಿಲ್ಲ. ಗನ್ ಸಿಕ್ಕಿಲ್ಲ. ಈ ಪ್ರಕರಣದಿಂದ ಕರ್ನಾಟಕ ತಲೆತಗ್ಗಿಸುವಂತಾಗಿದೆ. ಸರ್ಕಾರ ತಕ್ಷಣ ಕ್ಷಮೆಯಾಚಿ ಸಬೇಕು. ಇಷ್ಟಕ್ಕೆಲ್ಲಾ ಕಾರಣ ಡಿಸಿಎಂ ಡಿಕೆ ಶಿವಕುಮಾರ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಾರಣ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ, ಚಂದ್ರಶೇಖರ ಕವಟಗಿ, ವಿಜಯ ಜೋಶಿ ಉಪಸ್ಥಿತರಿದ್ದರು.