Belagavi

ಬೆಳಗಾವಿ ರಾಮತೀರ್ಥ ನಗರದ ರಹಿವಾಸಿ ವೀರಪ್ಪ ಚೆನ್ನಪ್ಪ ಬಡಿಗೇರ್ ನಿಧನ ; ದೇಹದಾನ

Share

ಬೈಲಹೊಂಗಲ ತಾಲೂಕಿನ ತಿಗಡಿ ಮೂಲದ ಸದ್ಯ ಬೆಳಗಾವಿ ರಾಮತೀರ್ಥ ನಗರದ ರಹಿವಾಸಿ ವೀರಪ್ಪ ಚೆನ್ನಪ್ಪ ಬಡಿಗೇರ್ (97) ಇಂದು ನಿಧನರಾಗಿದ್ದು, ಅವರ ಇಚ್ಛೆಯಂತೆ ದೇಹ ದಾನವನ್ನು ಮಾಡಲಾಯಿತು.

ಬೆಳಗಾವಿಯ ಕೆಎಲ್‌ಇ ಜೆ ಎನ್ ಎಂ ಸಿ ವೈದ್ಯಕ್ಕೆ ಮಹಾವಿದ್ಯಾಲಯಕ್ಕೆ ಡಾಕ್ಟರ್ ರಾಮನ್ ಅವರ ಚಾರಿಟೇಬಲ್ ಟ್ರಸ್ಟ್ ಬೈಲಹೊಂಗಲ ಹಾಗೂ ಹುಬ್ಬಳ್ಳಿಯ ಜಗದ್ಗುರು ಗಂಗಾಧರ್ ಮಹಾಸ್ವಾಮೀಜಿಗಳ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯದ ಮೂಲಕ ದೇಹ ದಾನವನ್ನು ಮಾಡಲಾಯಿತು. ಡಾಕ್ಟರ್ ಮಹಾಂತೇಶ್ ರಾಮಣ್ಣವರ್ ಅವರು ದೇಹ ದಾನ ಮಾಡಿದ ಬಡಿಗೇರ್ ಕುಟುಂಬಸ್ಥರಿಗೆ ಮಾರ್ಗದರ್ಶನ ನೀಡಿದರು. ಮೃತರು ಇಬ್ಬರು ಸುಪುತ್ರರು ಇಬ್ಬರು ಸುಪುತ್ರಿಯರನ್ನ ಅಗಲಿದ್ದಾರೆ.

Tags:

error: Content is protected !!