Uncategorized

ಬಿಜಗರ್ಣೆಯಲ್ಲಿ ಅಪರಿಚಿತ ಮೃತದೇಹ ಅಂತ್ಯಕ್ರಿಯೆ ನಡೆಸಿದ ಬಿಜಗರ್ಣೆ ಗ್ರಾಮ ಪಂಚಾಯಿತಿ ಮತ್ತು ಕದಂಬ ಫೌಂಡೇಶನ್

Share

ಖಾನಾಪೂರ ತಾಲೂಕಿನ ಬಿಜಗರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಅಪರಿಚಿತ ಮನೋರೋಗಿ ಬುದ್ಧಿ ಮಾಂದ್ಯನೊಬ್ಬ ಬಂದಿದ್ದ ಗ್ರಾಮದ ಕೆಲವರು ಆತನಿಗೆ ಕೇಳಿದಾಗ ಬಿಜಾಪುರ, ಬಿಜಾಪುರ ಅಂತ ಹೇಳುತ್ತಿದ್ದ ಅವನಿಗೆ ಕೆಲವರು ಊಟಾ, ತಿಂಡಿ ನೀಡುತ್ತಿದ್ದರು ತದನಂತರದಲ್ಲಿ ಆತ ನಾಪತ್ತೆಯಾದ ಕೆಲವು ದಿನಗಳ ನಂತರ ಗ್ರಾಮಸ್ಥರು ಕಲ್ಮೇಶ್ವರ ದೇವಸ್ಥಾನದ ಬಳಿಯ ಚರಂಡಿಯ ನೀರಿನಲ್ಲಿ ಆತನ ಶವವನ್ನು ಪತ್ತೆ ಆಗಿರುವುದು ಕಂಡು ನಂದಗಡ ಪೋಲಿಸರಿಗೆ ಮಾಹಿತಿ ನೀಡಿದರು

ಮೃತ ದೇಹ ಸಂಪೂರ್ಣ ಕೊಳೆತಿದ್ದ ಸ್ಥಿತಿಯಲ್ಲಿ ಇತ್ತು ಗುರುತು ಪತ್ತೆ ಯಾಗದ ರೀತಿಯಲ್ಲಿ ಇತ್ತು ನಂದಗಡ ಪೋಲಿಸರು ಪಂಚನಾಮೆ ಮಾಡಿ ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಆಸ್ಪತ್ರೆಗೆ ರವಾನಿಸಿ ತದನಂತರದಲ್ಲಿ ಖಾನಾಪೂರದ ಸಮಾಜ ಸೇವಕ ಹಾಗೂ ಕದಂಬ ಸೋಶಿಯಲ್ ಫೌಂಡೇಶನ್ ಅಧ್ಯಕ್ಷ ಜೋರ್ಡಾನ್ ಗೊನ್ಸಾಲಿಸ್ ಅವರ ನೆರವಿನಿಂದ ಗ್ರಾಮ ಪಂಚಾಯಿತಿ ಬಿಜಗರ್ಣೆ ಅವರ ಸಹಕಾರದಿಂದ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಬಿಜಗರ್ಣೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೈ.ಎಸ್.ಭಜಂತ್ರಿ ,ಗಣಕ ನಿರ್ವಾಹಕ ಮೋಹನ್ ಮಾದಾರ,ನಂದಗಡ ಪೋಲಿಸ್ ಠಾಣೆಯ ಎಎಸ್ಐ ಬಾಬು ಆರೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!