Banglore

ನನ್ನನ್ನು ಮುಗಿಸುವ ಸಂಚಿತ್ತೇನೋ…ಅದಕ್ಕೆ ಕಬ್ಬಿನ ಗದ್ದೆಗೆ ಕರೆದ್ಯೊಯದ್ದಿದ್ದರು…

Share

ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ನನ್ನನ್ನು ಮುಗಿಸಲು ಸಂಚು ಮಾಡಿದ್ರು ಎನ್ನುವ ಅನುಮಾನ ಇದೆ. ಒಬ್ಬ ಜನಪ್ರತಿನಿಧಿಗೆ ಈ ರೀತಿ ನಡೆಸಿಕೊಂಡ್ರೆ ಹೇಗೆ ಎಂದು ಪ್ರಶ್ನಿಸಿದರು. ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ಟ ದೂರನ್ನು ತಗೊಂಡಿದ್ದೀರಿ, ಆದರೆ ನನ್ನ ದೂರು ತಗೊಂಡಿಲ್ಲ.ಸಭಾಪತಿಯವರಿಂದ ಅರೆಸ್ಟ್ ಅನುಮತಿ ಪಡೆದಿದ್ರಾ..? ಇದೆಲ್ಲದವರ ಬಗ್ಗೆ ನ್ಯಾಯ್ಯಾಂಗ ತನಿಖೆಯಾಗಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ಇಂದು ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಹಿಡನ್ ಅಜೆಂಡಾ, ಸತ್ಯ ಸಂಗತಿಯನ್ನು ಬಿತ್ತರಿಸಿ, ಪರೋಕ್ಷವಾಗಿ ನನ್ನನ್ನು ರಕ್ಷಣೆ ಮಾಡಿದ್ದೀರಿ, ಹಾಗಾಗಿ ಮಾಧ್ಯಮಗಳಿಗೆ ಕೃತಜ್ಞತೆಗಳು ಎಂದರು. 19ನೇ ವಿಧಾನಪರಿಷತ್ ನಲ್ಲಿ ಕಲಾಪ ಶುರು ವಾಗಿತ್ತು. ಅಂಬೇಡ್ಕರ್ ಭಾವಚಿತ್ರ ಹಿಡಿದು ಕಾಂಗ್ರೆಸ್ ಅಪಮಾನದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ವಿ, ಅವ್ರು ಘೋಷಣೆ ಕೂಗಿದ್ರು, ನಾವು ಘೋಷಣೆ ಕೂಗ್ತಿದ್ವಿ. ಎರಡು ಮೂರು ಬಾರಿ ಕಲಾಪ ಮುಂದೂಡಿಕೆ ಆಯ್ತು, ಪ್ರಾರಂಭ ಆಯ್ತು.

ಊಟ ಮುಗಿಸಿ ಬರುವಾಗ ಕಾರಿನ ಮೇಲೆ ಅಟ್ಯಾಕ್ ಮಾಡಿದ್ರು, ಅವ್ರು ಯಾಕೆ ಅಟ್ಯಾಕ್ ಮಾಡಿದ್ರು ಅಂತಾನೇ ನನಗೆ ಗೊತ್ತಾಗಿಲ್ಲ. ಆ ನಂತರ ನನ್ನ ಮೇಲೆ ಪುಂಕಾನುಪುಕ ಆರೋಪ ಹೊರಸಿದ್ರು ಅದರಿಂದಲೇ ಇದು ಆಗ್ತಿದೆ ಅಂತಾ ಗೊತ್ತಾಯಿತು. ಆ ಆಮೇಲೆ ಆರ್.ಅಶೋಕ್ ಕರೆದಿದ್ರು ಅಂತಾ ವಿಧಾನಸಭೆ ಲಾಂಜ್ ಗೆ ಬಂದು ಹೋಗ್ತಾ ಇರಬೇಕಾದ್ರೆ ನನ್ನ ಮೇಲೆ ಮತ್ತೆ ಅಟ್ಯಾಕ್ ಮಾಡಿದ್ರು, ನಿನ್ನ ಕೊಲೆ ಮಾಡ್ತೀವಿ, ನಿನ್ನನ್ನು ಪೀಸ್ ಪೀಸ್ ಮಾಡ್ತೀವಿ, ನಿನ್ನ ಹೆಣ ಕಳುಹಿಸ್ತೇವೆ ಅಂತೆಲ್ಲ ಬಂದ್ರು, ಆ ನಂತರ ನಾನು ಅಲ್ಲೇ ಧರಣಿಗೆ ಕೂತ್ಕೊಂಡೆ ಎಂದರು.

ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ನನ್ನನ್ನು ಮುಗಿಸಲು ಸಂಚು ಮಾಡಿದ್ರು ಎನ್ನುವ ಅನುಮಾನ ಇದೆ. ಯಾಕೆಂದರೆ ವಿಧಾನ ಪರಿಷತ್‌ನಲ್ಲೇ ನಿನ್ನ ಮುಗಿಸೋದಾಗಿ ಹೇಳಿದ್ರು. ನನ್ನನ್ನು ಕೋರ್ಟ್ ಗೆ ಕರೆದುಕೊಂಡು ಬಂದಾಗ, ನಾನು ಅಲ್ಲಿ ಎಲ್ಲವನ್ನೂ ಹೇಳಿದ್ದೇನೆ. ಒಬ್ಬ ಜನಪ್ರತಿನಿಧಿಗೆ ಈ ರೀತಿ ನಡೆಸಿಕೊಂಡ್ರೆ ಹೇಗೆ ಎಂದು ಪ್ರಶ್ನಿಸಿದರು. ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ಟ ದೂರನ್ನು ತಗೊಂಡಿದ್ದೀರಿ, ಆದರೆ ನನ್ನ ದೂರು ತಗೊಂಡಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಗೆ ವಿಶೇಷ ಹಕ್ಕು ಕೊಟ್ಟರಿ, ನನಗೆ ಕೊಟ್ಟಿಲ್ಲ, ನನ್ನನ್ನು ಯಾಕೇ ಕಸ್ಟಡಿಗೆ ತಗೊಂಡ್ರಿ..? ನನಗೆ ಯಾಕೆ ಮೊದಲೇ ನೋಟಿಸ್ ಕೊಟ್ಟಿಲ್ಲ? ಸಭಾಪತಿಯವರಿಂದ ಅರೆಸ್ಟ್ ಅನುಮತಿ ಪಡೆದಿದ್ರಾ..? ಎಂದು ಪ್ರಶ್ನಿಸಿದರು.

12 ಗಂಟೆಯಿಂದ 3 ಗಂಟೆವರೆಗೂ, ಗದ್ದೆ ಕಾಡು, ಹಳ್ಳಿ ರಸ್ತೆಗೆ ಕರೆದುಕೊಂಡು ಹೋದ್ರು, ಅಲ್ಲಿ ಕುಡಿಯೋಕೂ ನೀರು ಕೊಟ್ಟಿಲ್ಲ, ವಾಶ್ ರೂಮ್ ಗೂ ಬಿಟ್ಟಿಲ್ಲ. ಕೊನೆಗೆ ಸ್ಟೋನ್ ಕ್ರಶರ್ ಬಳಿ ಕರೆದುಕೊಂಡು ಹೋದ್ರು, ಅಲ್ಲಿಗೂ ಹೇಗೋ ಮಾಧ್ಯಮಗಳು ಬಂದ್ರು, ನಂತರ ಕೇಶವ ಪ್ರಸಾದ್ ಬಂದು ನನ್ನ ಕಾರಿನಲ್ಲಿ ಬಂದು ಕೂತ್ರು. ಪ್ರತಿ ಹತ್ತು ಹದಿನೈದು ನಿಮಿಷಕ್ಕೊಮ್ಮೆ ಪೊಲೀಸರಿಗೆ ಫೋನ್ ಬರುತ್ತಿತ್ತು. ನನ್ನ ಫೋನ್ ಸೀಜ್ ಮಾಡಿ ಅಂತಾ ಪೊಲೀಸರಿಗೆ ಗದರಿದ್ರು, ಅವಾಗ ನನ್ನ ಫೋನ್ ಕಿತ್ತುಕೊಂಡ್ರೆ ನಾನು ಹಳೆ ರವಿ ಆಗಬೇಕಿತ್ತೆ ಎಂದು ತಳ್ಳಾಟ ನೂಕಾಟ ಆಯ್ತು ಎಂದರು. ಚಿದಂಬರಂ ರಾಮದುರ್ಗ ಎಸಿಪಿ, ಗಂಗಾಧರ್ ಬೆಳಗಾವಿಯ ಮಾರ್ಕೆಟ್ ಎಸಿಬಿ, ಪ್ರವೀಣ್ ಕಿತ್ತೂರು ಪಿಸಿಐ.. ಇವರಿಗೆ ಹತ್ತು ಹತ್ತು ನಿಮಿಷಕ್ಕೂ ಒಂದೊಂದು ಡೈರೆಕ್ಸನ್ ಬರುತ್ತಿತ್ತು. ಕೇಶವ ಪ್ರಸಾದ್ ರನ್ನು ಮತ್ತೆ ಎಳೆದು ನನ್ನ ಒಬ್ಬನನ್ನೇ ಕರೆದುಕೊಂಡು ಹೋದ್ರು ಎಂದರು.

ಮುಧೋಳದತ್ತಿರ ಕರೆದುಕೊಂಡು ಹೋದ್ರು. ಅಲ್ಲೊಬ್ಬ ಯಾರೋ ಒಬ್ಬ ದಪ್ಪ ಇರೋನು ನನ್ನ ಮೊಬೈಲ್ ಕಿತ್ತುಕೊಳ್ಳಲು ಬಂದ, ಅವಾಗ ನಾನು ನನ್ನ ತಲೆಯನ್ನು‌ ಚಚ್ಚಿಕೊಂಡೆ, ಅಷ್ಟ ಹೊತ್ತಿಗೆ ನನ್ನ ತಲೆಯಲ್ಲಿ ರಕ್ತ ಬಂತು, ಪೊಲೀಸರು ಮತ್ತೆ ನನ್ನ ಫೋನ್ ಕಿತ್ತುಕೊಳ್ಳೋಕೆ ಬಂದ್ರು, ಅವಾಗ ನಾನು ನನ್ನ ಫೋನ್ ಕೊಡಲ್ಲ ಅಂತಾ ರೌದ್ರವತಾರ ತೋರಿಸಿದೆ. ನಿಮ್ಮ ಕಾಲು ಹಿಡಿಯುತ್ತೇವೆ, ಮೇಲಿಂದ ಹೇಳ್ತಿದ್ದಾರೆ ಕೊಟ್ಟು ಬಿಡಿ ಸರ್ ಅಂತಾ, ಆ ನಂತರ ಬಾಗಲಕೋಟೆ ಎಸ್ಪಿಯವರು ಬಂದು ಕೂತ್ಕೊಂಡ್ರು. ಆ ಮೇಲೆ ಏನು ಹೆದರಬೇಡಿ, ಫೋನ್ ಕೊಟ್ಟು ಬಿಡಿ ಅಂದ್ರು. ಇದಲ್ಲೇ ನೋಡಿದರೇ ನನ್ನ ಫೋನ್ ಟ್ಯಾಪ್ ಆಗುತ್ತಿತ್ತು ಅಣಿಸುತ್ತಿದೆ. ಇದರ ವಿರುದ್ಧ ತನಿಖೆಯಾಗಬೇಕು ಎಂದರು.

Tags:

error: Content is protected !!