ಇತ್ತೀಚೆಗೆ ಕಳೆದ ಸುಮಾರು ಇಪ್ಪತ್ತು ದಿನಗಳ ಹಿಂದೆಯಷ್ಟೇ ಧಾರವಾಡದ ಐತಿಹಾಸಿಕ ಕೆರೆಗಳಲ್ಲಿ ಒಂದಾದ ಕೆಲಗೇರಿ ಕೆರೆಗೆ ಉಪ ಲೋಕಾಯುಕ್ತರು ಭೇಟಿ ನೀಡಿ ಕೆರೆಯ ಸ್ವಚ್ಚತೆ ಸೇರಿ ಸುತ್ತಮುತ್ತ ಉತ್ತಮ ವಾತಾವರಣ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ನಂತರ, ಈಗ ಅದೇ ಕೆರೆಗೆ ಇಂದು ಧಾರವಾಡ ಜಿಲ್ಲಾ ಕಾನೂನೂ ಸೇವಾ ಪ್ರಾಧಿಕಾರದ ಅಧ್ಯಕ್ಷ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು ಭೇಟಿ ನೀಡಿ ಪರಿಶೀಲನೆ ಕೈಗೊಂಡು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನ್ಯಾಯಾಧೀಶರು ಬೇಸರಗೊಂಡ ಪ್ರಸಂಗ ನಡೆದಿದೆ.
ಹೌದು ಇತ್ತೀಚೆಗೆ ಉಪಲೋಕಾಯುಕ್ತರು ಕೆರೆಯ ಸಂರಕ್ಷಣೆ ಜತೆಗೆ ಸಾರ್ವಜನಿಕರ ದೂರುಗಳ ಬಂದ ಹಿನ್ನಲೆಯಲ್ಲಿ ಕೆರೆಗೆ ಭೇಟಿ ನೀಡಿ ಹುಬ್ಬಳ್ಳಿಧಾರವಾಡ ಮಾಹಾನಗರ ಪಾಲಿಕೆ ಸೇರಿ ಕೃಷಿ ವಿಶ್ವ ವಿದ್ಯಾಯಲ ಅಧಿಕಾರಿಗಳಿಗೆ ಕೆರೆ ಸ್ವಚ್ಚತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ 20 ದಿನಗಳ ಕಾಲಾವಧಿ ನೀಡಿದರು. ಈ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾ ಕಾನೂನೂ ಸೇವಾ ಪ್ರಾಧಿಕಾರದ ಅಧ್ಯಕ್ಷ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಪರುಶುರಾಮ ಎಪ್ ದೊಡ್ಡಮನಿ ಭೇಟಿ ನೀಡಿ ವಾಸ್ತವತೆಯನ್ನುಅರಿಯು ಕೆಲಸ ಮಾಡಿದರು. ಕೆರೆಗೆ ಕಳಚೆ ನೀರು ಬರು ಕಾಲುವೆ, ಸುತ್ತಮುತ್ತಲು ಬೆಳೆದ ನಿಂತ ಕಸ ಕಡ್ಡಿ, ಕೆರೆಯ ನೀರಿನ ನೀರ ಕಳೆ ಸೇರಿ ಮದ್ಯದ ಬಾಟಲಗಳನ್ನು ನೋಡಿದ ನ್ಯಾಯಾಧೀಶರು ಕೆರೆಯ ಸುತ್ತಮುತ್ತಲ ವಾತಾವರಣ ನೋಡಿ ಬೇಸರಗೊಂಡರು.
ಉಪಲೋಕಾಯುಕ್ತರ ಸೂಚನೆಯ ನಂತರ ಕೆರೆಯ ಸುತ್ತಲಿನ ಕಸ ಕಡ್ಡಿ ತೆರವು ಪಾಲಿಕೆಯ ವ್ಯಾಪ್ತಿಗೆ ಬರಲಿದ್ದು, ಕೆರೆಯ ಒಳಾಂಗಣ ಸ್ವಚ್ಚತೆಯನ್ನು ಕೃಷಿ ವಿಶ್ವವಿದ್ಯಾಯಲ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಇದೂವರೆಗೂ ಸೂಚನೆಯನ್ವ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನೂ ಇದೇವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಕಾನೂನೂ ಸೇವಾ ಪ್ರಾಧಿಕಾರದ ಅಧ್ಯಕ್ಷ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಪರುಶುರಾಮ ಎಪ್ ದೊಡ್ಡಮನಿ ಅವರು, ಉಪ ಲೋಕಾಯುಕ್ತರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ, ಕಲಗೇರಿ ಕೆರೆಯ ವಸ್ತಾವ ಕುರಿತು ಸಮಗ್ರ ವರದಿ ನೀಡಲು ತಿಳಿಸಿದರು, ಹಿನ್ನಲೆಯಲ್ಲಿ ಇಂದು ವಿಸೀಟ್ ಮಾಡಿ ನೋಡಿದ್ದೇವೆ. 20 ದಿನಗಳ ಉಪಲೋಕಾಯುಕ್ತರು ಸಮಯವಕಾಶ ನೀಡಿದರು ಇಲ್ಲಿ ಅಧಿಕಾರಿಗಳು ಕೈಗೊಂಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.