ಖಾನಾಪೂರ ಪೋಲಿಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ನಿಮಿತ್ಯ ಇನ್ಸ್ಪೆಕ್ಟರ್ ಮಂಜುನಾಥ ನಾಯಕ ಇವರ ಮಾರ್ಗದರ್ಶನದಲ್ಲಿ ಸಾರ್ವಜನಿಕರಿಗೆ ಸರಕಳ್ಳತನ, ಪಿಕ್ ಪಾಕೆಟ್,ಅಟೇನ್ಯನ್ ಡೈವರ್ಶನ್ ಸೇರಿದಂತೆ ಮನೆಗಳತನ ಪ್ರಕರಣಗಳ ಕುರಿತು ಖಾನಾಪೂರ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು ಈ ಎಲ್ಲ ಕುರಿತು ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ತಿಳಿ ಹೇಳಲಾಯಿತು
ಅದರಂತೆಯೇ ನಿಮಗೆ ಯಾವುದು ತೊಂದರೆ ಆದಲ್ಲಿ ಎಮರ್ಜೆನ್ಸಿ ಸಲುವಾಗಿ 112ನಂಬರ್ ಗೆ ಕಾಲ್ ಮಾಡಿ ಪೋಲಿಸ್ ಸಹಾಯ ಪಡೆದುಕೊಳ್ಳಲು ಸೂಚನೆ ನೀಡಲಾಯಿತು ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್ಐ ಎಮ್.ಬಿ.ಬಿರಾದಾರ , ಪಿಎಸ್ಐ ಸಿ.ಎಲ್.ಬಬಲಿ ಮತ್ತು ಸಿಎಚ್ ಸಿ ಹವಾಲ್ದಾರ್ ಜಗದೀಶ್ ಕಾದ್ರೋಳ್ಳಿ, ಬಿ ಜಿ.ಯಲಗಾರ್, ಶೇಷಪ್ಪ ಕಾಮಕೇರಿ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದು ಅಪರಾಧ ತಡೆ ಮಾಸಾಚರಣೆ ನಿಮಿತ್ಯ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸಿದರು.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ