ಐನಾಪುರ್ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ 19 ವಾರ್ಡಗಳ ಚರಂಡಿ, ರಸ್ತೆಗಳ ಅಭಿವೃದ್ಧಿಗಾಗಿ 15ನೇ ಹಣಕಾಸಿನ ಯೋಜನೆ ಅಡಿಯಲ್ಲಿ 96 ಲಕ್ಷ ರೂಪಾಯಿಯ್ ಅನುದಾನ ಮಂಜೂರು ಗೊಂಡಿದ್ದು ಇದರ ಸದುಪಯೋಗ ಪಡೆದುಕೊಂಡು ಪಟ್ಟಣದ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಬೇಕೆಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಬುಧವಾರರಂದು ಐನಾಪುರ್ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಶ್ರೀಮತಿ ಸರೋಜಿನಿ ಸುರೇಶ್ ಗಾಣಿಗೇರ್ ಇವರ ಹಸ್ತೆಯಿಂದ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ವೇಳೆ ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಸಕರು ಗುತ್ತಿಗೆದಾರರಾದ ಸುನಿಲ್ ಅವಟಿ ಹಾಗೂ ಇನ್ನುಳಿದ ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಿದರು.
ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳಾದ ಮಹಾಂತೇಶ್ ಕೌಲಾಪುರ ಶಾಸಕರಿಗೆ ಮಾಹಿತಿ ನೀಡುವಾಗ, ಸರ್ಕಾರದ 15ನೇ ಹಣಕಾಸಿನ ಯೋಜನೆಯ ಎಸ್.ಎಫ್.ಸಿ ಯೋಜನೆ ಅಡಿಯಲ್ಲಿ 96 ಲಕ್ಷ ರೂಪಾಯಿ ಮಂಜೂರು ಗೊಂಡಿದ್ದು, ಪಟ್ಟಣದ 19 ವಾಡ್ರ್ಗಳಲ್ಲಿ ಅವಶ್ಯಕೆತೆಯಲ್ಲಿ ಇರುವ ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ ಹಾಗೂ ಇನ್ನಿತರ ಸೌಕರ್ಯಗಳು ನೀಡಲಾಗುವುದು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿಯ ಸದಸ್ಯರಾದ ಅರುಣ್ ಗಾಣಿಗೇರ್, ಪ್ರವೀಣ್ ಗಾಣಿಗೇರ್, ಸಂಜೆಯ ಬಿರಡಿ, ಅರವಿಂದ್ ಕಾರ್ಚಿ, ಕುಮಾರ್ ಜೈಕರ್, ಅಭಿಯಂತರಾದ ವಿಠ್ಠಲ್ ನಾಗಿನಕೇರಿ, ಹಿರಿಯರಾದ ಸುಭಾಷ ಪಾಟೀಲ್, ಚಾಮನ್‍ರಾವ್ ಪಾಟೀಲ್, ಸುರೇಶ್ ಅಡಿಕೇರಿ, ಸುನಿಲ್ ಪಾಟೀಲ್, ಸದಾಶಿವ್ ಗಾಣಿಗೇರ್, ವಿಶ್ವನಾಥ್ ನಾಮದಾರ ಹಾಗೂ ಎಲ್ಲ ಚುನಾಯಿತ ಸದಸ್ಯರು ಉಪಸ್ಥಿತರಿದ್ದರು.
ಸುಕುಮಾರ್ ಬನ್ನೂರೆ
ಇನ್ನು ನ್ಯೂಸ್ ಕಾಗವಾಡ