ತೋಟದಲ್ಲಿ ಇದ್ದ ಪತ್ರಾಶ್ ಶೆಡನಲ್ಲಿ ದನಗಳನ್ನು ಕಟ್ಟಲು ಹೋಗಿ ಕರೆಂಟ್ ತಾಗಿ ಸ್ಥಳದಲ್ಲೇ ವ್ತಕ್ತಿಯ ಸಾವು ಸಂಭವಿಸಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕು ತದ್ದೇವಾಡಿ ಗ್ರಾಮದ ತೋಟದ ವಸತಿ ಲಕ್ಷ್ಮಣ ಮಾಹಾದೇವ ಸೊನಕನಳ್ಳಿ ಮೃತ ವ್ಯಕ್ತಿ. ತೋಟದಲ್ಲಿ ಹೋಲಕ್ಕೆ ನೀರು ಉಣಿಸುವ ಸಂದರ್ಭದಲ್ಲಿ ದನದ ಕೊಟ್ಟಿಗೆಯಲ್ಲಿ ದನಗಳು ಕಟ್ಟಲು ಹೋದಾಗ ಕರೆಂಟ್ ತಾಗಿ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಜರುಗಿದೆ.
ಈ ಕುರಿತು ಝಳಕಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತನಿಗೆ ನಾಲ್ಕು ಜನ ಮಕ್ಕಳು ಇದ್ದಾರೆ, ಅಪಾರ ಬಂದು ಬಳಗ ಹೊಂದಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಝಳಕಿ ಪೋಲಿಸ್ ಸಿಬ್ಬಂದಿಗಳು , ಹೇಸ್ಕಾಂ ಅಧಿಕಾರಿಗಳು ಬೇಟಿ ನೀಡಿದರು.