ಧಾರವಾಡದಿಂದ ಮನಗುಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂಪೂರ್ಣ ಹದಗೆಟ್ಟು ಹೋಗಿದ್ದು, ತಗ್ಗು ಗುಂಡಿಗಳ ಕಾರಬಾರು ಜೋರಾಗಿದೆ. ಇದರಿಂದಾಗಿ ನಿತ್ಯವು ಮನಗುಂಡಿ ಸೇರಿ ಇದೇ ರಸ್ತೆ ಮಾರ್ಗವಾಗಿ ತೆರಳುವ ಬೆಳ್ಳಿಗಟ್ಟಿ ಗ್ರಾಮಸ್ಥರು ಕೈಯಲ್ಲಿ ಜೀವ ಹಿಡಿದುಕೊಂಡು ಹಿಡಿಶಾಪ ಹಾಕುತ್ತಲಾ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಹೌದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ವಿಧಾನ ಸಭಾ ಕ್ಷೇತ್ರದ ಈ ಗ್ರಾಮದ ಜನರು ನಿತ್ಯ ಕೈಯಲ್ಲಿ ಜೀವ ಹಿಡಿದುಕೊಂಡು ಸಂಚಾರ ನಡೆಸಬೇಕಾಗಿದೆ. ಪ್ರತಿ ಬಾರಿ ಕಳಪೆ ರಸ್ತೆ ಕಾಮಗಾರಿ ಮಾಡಿ, ಮಾರನೇ ವರ್ಷವೇ ರಸ್ತೆ ಹದಗೆಡುವಂತೆ ಮಾಡಲಾಗುತ್ತಿದಿಯಂತೆ. ಸದ್ಯ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಬೈಕ್‌ಗಳು, ಚಕ್ಕಡಿ ರಸ್ತೆಯಲ್ಲಿ ಓಡಾಡಲು ಬರದಂತ ಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಈ ರಸ್ತೆಯ ಮೇಲೆ ಮಣ್ಣು, ಜಲ್ಲಿಕಲ್ಲು ಹಾಕಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ.
ಆದರೆ, ಇದುವರೆಗೂ ಇಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿಲ್ಲ ಅನ್ನುವು ಗ್ರಾಮಸ್ಥರ ಆರೋಪವಾಗಿದೆ. ಮುಂದೆ ಮಾಡಿದ ರಸ್ತೆ ಹಿಂದೆ ಕೀಳುತ್ತಾ ಹೋಗುತ್ತದೆ. ಸದ್ಯ ಈ ರಸ್ತೆ ಹದಗೆಟ್ಟಿದ್ದು, ಪ್ರತಿನಿತ್ಯ ಸಾರ್ವಜನಿಕರಿಗೆ ನರಕ ಸೃಷ್ಟಿಸುತ್ತಿದೆ. ಈಗಲಾದ್ರೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ತಮ್ಮ ವಿಧಾನ ಸಭಾ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕಿದೆ.