Uncategorized

ಲಿಂಗೈಕೆ ಕೇದಾರ ಶಾಂತಲಿಂಗ ಜಗದ್ಗುರುಗಳ ಮೂರ್ತಿ ಪ್ರತಿಷ್ಠಾಪನೆ

Share

ಬೆಳಗಾವಿ ತಾಲೂಕಿನ ‌ಮುತ್ನಾಳ ಗ್ರಾಮದಲ್ಲಿ ಲಿಂಗೈಕೆ ಕೇದಾರ ಶಾಂತಲಿಂಗ ಜಗದ್ಗುರು ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಡಿ.24 ಹಾಗೂ 25ರಂದು ಜರುಗಲಿದೆ.

ಶ್ರೀಮದ್ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು, ಶ್ರೀಮದ್ ಕೇದಾರ ಜಗದ್ಗುರು ಭೀಮಾಶಂಕರ ಶಿವಾಚಾರ್ಯ ಭಗವತ್ಪಾದರು ಆಗಮಿಸಿ ಜಗದ್ಗುರುಗಳ ಮೂರ್ತಿ ಪ್ರತಿಷ್ಠಾಪನೆ ಮಾಡಲಿದ್ದಾರೆ ಎಂದು ಮತ್ನಾಳ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಜಿಲ್ಲೆಯ 25ಕ್ಕೂ ಹೆಚ್ಚು ಹರಗುರು, ಚರಮೂರ್ತಿಗಳು ಆಗಮಿಸಲಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿಶೇಷವಾದ ಮಾರ್ಗದರ್ಶನದಲ್ಲಿ ಜರುಗಲಿದೆ ಎಂದು ಪ್ರಕಟಣೆಯಲ್ಲಿ ಶ್ರೀಗಳು ತಿಳಿಸಿದ್ದಾರೆ‌.

Tags:

error: Content is protected !!