Kagawad

ಜನವರಿ 2 ರಂದು ಪರಮಪೂಜ್ಯ ಸಿದ್ದೇಶ್ವರ ಮಹಾರಾಜರ ಎರಡನೇ ಪುಣ್ಯಸ್ಮರಣೆ ಎಲ್ಲರೂ ಭಾಗಿಯಾಗಿ; ಶ್ರೀ ಅಮರೇಶ್ವರ ಮಹಾರಾಜ್

Share

ಕಾಗವಾಡ – ಇದೆ ಬುಧವಾರರ ದಿನಾಂಕ. 25 ರಿಂದ ಜನೆವರಿ 2 ರ ವರೆಗೆ ಪ.ಪೂ. ಶ್ರೀ ಸಿದ್ದೇಶ್ವರ ಶ್ರೀಗಳ ಗುರುನಮನ ಮಹೋತ್ಸವ; ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ; ಹೆಚ್ಚಿನ ಭಕ್ತರು ಪಾಲ್ಗೊಳ್ಳಲು ಮನವಿ..!

ವಿಜಯಪೂರ ಜ್ಞಾನೇಶ್ರಾಮದಲ್ಲಿ ಡಿ.25 ರಿಂದ ಜ.2 ರ ವರೆಗೆ ನಡೆದಾಡುವ ದೇವರು ಪ.ಪೂ. ಸಿದ್ದೇಶ್ವರ ಶ್ರೀಗಳ ಎರಡನೇ ಗುರುನಮನ ಮಹೋತ್ಸದ ನಿಮಿತ್ಯವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜುಗೂಳ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕವಲಗುಡ್ಡದ ಪಪೂ. ಅಮರೇಶ್ವರ ಮಹಾರಾಜರು ಹೇಳಿದ್ದಾರೆ.

ಅವರು ಶನಿವಾರ ದಿ.21 ರಂದು ತಾಲೂಕಿನ ಜುಗೂಳ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಡಿ. 25 ರಿಂದ ಪ್ರಾರಂಭಗೊಳ್ಳಲಿರುವ ಗುರನಮನ ಮಹೋತ್ಸವದಲ್ಲಿ ಸತತ 8 ದಿನಗಳ ಕಾಲ ಜ್ಞಾನದಾಸೋಹ, ಸುಧಾರಿತ ಕೃಷಿ, ಜ್ಞಾನಾರಾಧನೆ, ಗ್ರಾಮ ಸಂಸಕೃತಿ, ಯೋಗ ಜೀವನ, ಮಾತೃ ಭಕ್ತಿ, ಜಾಗತೀಕ ತಾತ್ವಿಕ ಚಿಂತನೆಗಳು ಜೊತೆಗೆ ಗುರುದೇವರ ಬದುಕಿನ ಕುರಿತು ವಿಶೇಷ ಗೋಷ್ಠಿಗಳನ್ನು ಏರ್ಪಡಿಸಿದ್ದಾರೆಂದು ತಿಳಿಸಿದರು. ಅದೇ ಪ್ರಕಾರ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಪ್ರತಿವರ್ಷದಂತೆ ವೈಕುಂಠ ಏಕಾದಶಿಯ ದಿನ ಜ.10 ರಿಂದ ಮೂರು ದಿನಗಳ ವರೆಗೆ ವೇದಾಂತ ಕೇಸರಿ ಲಿಂಗೈಕ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಪರಮ ಶಿಷ್ಯರಾದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳ ಗುರುನಮನ ಮಹೋತ್ಸವವು ಜರುಗಲಿದ್ದು, ಕರ್ನಾಟಕ ಹಾಗೂ ಮಹಾರಾಷ್ಟçದ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆಂದು ಚಿಕ್ಕೋಡಿ ಸಿಬಿಕೆಎಸ್‌ಎಸ್ ಕಾರ್ಖಾನೆಯ ನಿರ್ದೇಶಕ ಅಣ್ಣಾಸಾಬ ಪಾಟೀಲ ತಿಳಿಸಿದ್ದಾರೆ.

ಇನ್ನೂ ಈ ಕುರಿತು ಶಾಸಕ ರಾಜು ಕಾಗೆ ಮಾತನಾಡಿ, ವಿಜಯಪೂರದಲ್ಲಿ ನಡೆಯುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕಾಗವಾಡ ಮತಕ್ಷೇತ್ರದ ಸದ್ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ಅಭಿನವ ಸಿದ್ದಾನಂದ ಮಹಾರಾಜರು, ಬನಸಿದ್ಧ ಶ್ರೀಗಳು, ಮುಖಂಡರಾದ ಅಣ್ಣಾಸಾಬ ಪಾಟೀಲ, ತಾತ್ಯಾಸಾಬ ಪಾಟೀಲ, ಭಾಸ್ಕರ ಪಾಟೀಲ, ಅನೀಲ ಕಡೋಲೆ, ಕಾಕಾಸಾಬ ಪಾಟೀಲ, ರಾಜು ಕಡೋಲೆ, ಬಾಬಾಸಾಬ ತಾರದಾಳೆ, ಅವಿನಾಶ ಪಾಟೀಲ, ಸುರೇಶ ಪಾಟೀಲ, ಭೀಮು ಪಾಟೀಲ, ಈರಗೌಡಾ ಪಾಟೀಲ, ಬಸವರಾಜ ನಂದಾಳೆ, ಅನೀಲ ಸುಂಕೆ, ರಾಜು ಗಾಂವಕರ, ಅಭಯ ಶಹಾ, ಪ್ರಮೋದ ಪಾಟೀಲ, ತಾತ್ಯಾಸಾಬ ಜಾಧವ, ಜಯಪಾಲ ಯಮಕನಮರಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುಕುಮಾರ್ ಬನ್ನೂರೆ
ಇನ್ ನ್ಯೂಸ್ ಕಾಗವಾಡ

Tags:

error: Content is protected !!