Kagawad

ಯಾವುದೇ ಸರ್ಕಾರಗಳಾಗಲಿ ರೈತರ ನೆರವಿಗೆ ಧಾವಿಸಿದಾಗ ಮಾತ್ರ ರೈತರ ಭವಿಷ್ಯ ಉಜ್ವಲ- ಶಾಸಕ ರಾಜು ಕಾಗೆ

Share

ಕಾಗವಾಡ – ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರಿಗೆ ಅವರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುದೊಮದಿಗೆ ಅಚರನ್ನು ಆರ್ಥಿಕವಾಗಿ ಸಬಲರನ್ನಾಯಿ ಮಾಡುಲು ರೈತ ನೀತಿ ಯೋಜನೆ ಜಾರಿಗೆ ತರಬೇಕು ಅಂದರೆ ಮಾತ್ರ ರೈತನ ಭವಿಷ್ಯ ಉಜ್ವಲವಾಗಲಿದೆ ಎಂದು ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಹೇಳಿದರು.

ಸೋಮವಾರಂದು ಕಾಗವಾಡ ಪಟ್ಟಣದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಕಾಗವಾಡ ಈ ಸಂಸ್ಥೆಯ ಶತಮಾನೋತ್ಸವ ನಿಮಿತ್ಯ ನೂತನ ಭವನದ ಉದ್ಗಾಟನೆ ನೇರೆವೆರಿಸಿ ಶಾಸಕರು ಮಾತನಾಡಿದರು. ಮುಂದುವರೆದು ಮಾತನಾಡುವಾಗ ರೈತನು ಬೆಳೆದ ಬೆಳೆಗಳು ಬಿತ್ತನೆ ವೇಳೆ ಇರುವ ದರ ಆತನ ಬೆಳೆದ ಬಳಿಕ ಇರುವುದಿಲ್ಲ ಎಲ್ಲ ಅಸ್ಥಿರವಾಗಿದೆ. ಇದರಿಂದ ರೈತ ಸಂಕಷ್ಟದಲ್ಲಿ ಇದ್ದು ಯಾವುದೇ ಪಕ್ಷದ ಸರಕಾರಗಳು ಇದ್ದರೂ ಇದರ ಬಗ್ಗೆ ಗಮನ ಹರಿಸಿ ರೈತರ ನೇರೆವಿಗೆ ನಿಲ್ಲಬೇಕು ಅಂದಾಗ ಮಾತ್ರ ದೇಶದ ಭವಿಷ್ಯ ಹಾಗೂ ರೈತರ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದರು.

ಸಮಾರಂಭದ ದಿವ್ಯ ಸಾನಿಧ್ಯ ವಯಿಸಿದ ಕೌಲಗುಡ್ಡ ಸಿದ್ರಾಶಮದ ಅಮರೇಶ್ವರ ಮಹಾರಾಜರು ಸಹಕಾರಿ ಸಂಘಗಳು ಅತ್ಯುತ್ನ ಮಟ್ಟದಲ್ಲಿ ಬೆಳೆಯಲು ಸಂಘದ ಆಡಳಿತ ಮಂಡಳಿಯ ಸದಸ್ಯರು ಸಿಬ್ಬಂದಿಗಳ ಪಾರದರ್ಶಕ ಆರ್ಥಿಕ ಸೇವೆಯಿಂದ ಸಂಸ್ಥೆಗಳು ಉರ್ಜಿತಾವಸ್ಥೆಯಲ್ಲಿ ಬರುತ್ತವೆ ೧೦೦ ವರ್ಷ ಹಿಂದೆ ಸ್ಥಾಪಿತವಾದ ಈ ಸಂಸ್ಥೆ ಅನೇಕ ರೈತರಿಗೆ ಆರ್ಥಿಕ ಜೀವ ತುಂಬಿದೆ ಈ ಸಂಸ್ಥೆಗಳು ಮಧ್ಯಾಹ್ನ ರಾತ್ರಿ ರೈತ ಸಂಸ್ಥೆಯ ಅಧ್ಯಕ್ಷರ ಬಳಿ ಹೋದಾಗ ಹಣದ ವ್ಯವಸ್ಥೆ ಮಾಡುವ ಈ ಸಂಸ್ಥೆಯಾಗಿವೆ ಎಂದರು.

ಸಂಸ್ಥೆಯ ಅಧ್ಯಕ್ಷ ಜ್ಯೋತಿಕುಮಾರ ಸಿದಗೌಡಾ ಪಾಟೀಲ ಮಾತನಾಡಿ ಕಳೆದ ಐದು ವರ್ಷಗಳ ಹಿಂದೆ ಸಂಘದ ಚುನಾವಣೆಯಲ್ಲಿ ರೈತರಿಗೆ ನೀಡುವ ಸಾಲ ಮೊತ್ತ ಹೆಚ್ಚಿಸುತ್ತೇವೆ ಮತ್ತು ಶತಮಾನೋತ್ಸವದ ಭವನ ಕಟ್ಟಿಸುವ ಜವಾಬ್ದಾರಿ ಹೊಂದಿದ್ದೇವೆ ಎಂದು ಹೇಳಿದ್ದೇವೆ ಅದೇ ರೀತಿ ೧೦ ಕೋಟಿ ರೂಪಾಯಿ ಸಾಲ ನೀಡಿದ್ದೇವೆ ಸುಮಾರು ೪೫ ಲಕ್ಷ ವೆಚ್ಚದಲ್ಲಿ ಶತಮಾನೋತ್ಸವ ಭವನ ನಿರ್ಮಾಣ ಮಾಡಿದ ಸಂತಸ ನಮಗಿದೆ ಎಂದರು.

ಕಾಗವಾಡದ ಗುರುದೇವ ಆಶ್ರಮದ ಎ.ಪಿ.ಶರಣಾಂದ ಸ್ವಾಮೀಜಿ ಮಾತನಾಡಿದರು. ಅದರಂತೆ ಶಿರಗುಪ್ಪಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗೆಣ್ಣವರ, ಕೃಷ್ಣಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪಾ ಸವದಿ, ಉಪಾಧ್ಯಕ್ಷ ಶಂಕರ ವಾಘಮೊಡೆ, ಸಂಚಾಲಕ ಸೌರಭ ಪಾಟೀಲ, ಶ್ರೀ ದತ್ತ ಸಕ್ಕರೆ ಕಾರ್ಖಾನೆಯ ಅಧ್ಯ÷ಕ್ಷ ರಘುನಾಥರಾವ ಪಾಟೀಲ, ತಾಲೂಕಾ ನಿಯಂತ್ರಣಾ ಅಧಿಕಾರಿ ಬಿ.ಡಿ.ಸಿಸ.ಬ್ಯಾಂಕ ಅಥಣಿ ಶಂಕರ ನಂದೇಶ್ವರ, ತಹಶಿಲ್ದಾರ ರಾಜೇಶ ಬುರ್ಲಿ, ಜುಗೂಳ ಪಿ.ಕೆ.ಪಿ.ಎಸ್.ಅಧ್ಯಕ್ಷ ಅಣ್ಣಾಸಾಹೇಬ ಪಾಟೀಲ, ಸಂಘದ ಉಪಾಧ್ಯಕ್ಷ ಬಸವರಾಜ ಉಪ್ಪಾರ, ಬಸಗೌಡ ಪಾಟೀಲ, ಎಲ್ಲ ಸಂಚಾಲಕರು ಕಾರ್ಯದರ್ಶಿ ರಾಜೇಂದ್ರ ಪೂಜಾರಿ, ರಮೇಶ ಚೌಗಲೆ, ಶಾಂತಿನಾಥ ಕಿನಂಗೆ, ಅಜೀತ ಕರವ, ಪದ್ಮಾಕರ ಕರವ, ಎ,ಎಸ್,ಪಾಟೀಲ, ಎ,ಜೆ,ಪಾಟೀಲ, ಪ್ರಕಾಶ ಪಾಟೀಲ, ಶಾಂತಿನಾಥ ಕರವ, ಸೇರಿದಮತೆ ಅನೇಕರು ಮುಖಂಡರು ಉಪಸ್ಥಿತರಿದ್ದರು.

ಸುಕುಮಾರ ಬನ್ನುರೆ
ಇನ್ ನ್ಯೂಸ್ ಕಾಗವಾಡ

Tags:

error: Content is protected !!