16ನೇ ಶತಮಾನದಲ್ಲಿ ಸಂತ ತುಕಾರಾಮರ ಜನ್ಮ ತಾಳಿ ಅವರು ಆಧ್ಯಾತ್ಮಿಕ ಕೊಡುಗೆ ನೀಡಿದರು. ನಾವು ನಮ್ಮನ್ನು ಸಮಾಜ ಸೇವೆಗಾಗಿ ತೊಡಗಿಸಿಕೊಳ್ಳಬೇಕೆಂದು ಸಂದೇಶ ನೀಡಿದರು. ಈ ಭವಸಾಗರದಲ್ಲಿ ನಾನು, ನಂದು, ನಮ್ಮದು ಇದು ಬದಿಗೆ ಇಟ್ಟು ಬೋಸಾಗರವನ್ನು ದಾಟಲು ತುಕಾರಾಮರು ಮಹಾರಾಜರು ವಿಠಲನ ನಾಮಸ್ಮರಣ ಮಾಡಿದರು ಇದೇ ಸಮಾಜಕ್ಕೆ ಕೊಡುಗೆ ಎಂದು ಕರ್ನಾಟಕ ರಾಜ್ಯದ ಮಾಜಿ ಸಚೇತಕ ಮಹಾಂತೇಶ ಕವಟಗಿಮಠ ಕುಸನಾಳದಲ್ಲಿ ಹೇಳಿದರು.
ಗುರುವಾರರಂದು ಕುಸನಾಳದ ಶ್ರೀ ಮಹಾಲಕ್ಷ್ಮಿ ಮಂದಿರದ ಸಭಾಭವನದಲ್ಲಿ ಶ್ರೀ ಕೃಷ್ಣಾ ಮಹಾರಾಜ್ ಇವರ ಐವತ್ತನೇ ಪುಣ್ಯ ಸ್ಮರಣೆ ನಿಮಿತ್ಯ ಹಮ್ಮಿಕೊಂಡ 5001. ಜ್ಞಾನೇಶ್ವರ ಪಾರಾಯಣದಲ್ಲಿ ಪಾಲ್ಗೊಂಡ ಸದ್ಭಕ್ತರ ಸಮೂಹದಲ್ಲಿ ಮಾತನಾಡಿದರು. ಶ್ರೀ ಕೃಷ್ಣಾ ಮಹಾರಾಜ್ ಸಂತ ತುಕಾರಾಮರ ಹಾಗೂ ವಿಠಲನ ಭಕ್ತರು. ಕುಸನಾಳ ಗ್ರಾಮದಲ್ಲಿ ಇಂಗಳಿ, ಕುಸನಾಳ್, ಮುಳವಾಡ ತಾಲೂಕಿನ ಅನೇಕ ಗ್ರಾಮಗಳ ಭಕ್ತರು ಒಂದುಗೂಡಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಏಕಕಾಲಕ್ಕೆ 5001 ಜನ ನಿರಂತರ ಏಳು ದಿನ ಪಾರಾಯಣ ಮಾಡುತ್ತಿದ್ದು ಇದು ಒಂದು ಇತಿಹಾಸ ಎಂದು ಮಹಾಂತೇಶ ಕವಟಗಿಮಠ ಹೇಳಿದರು.
ಸದಲಗಾ ಮಠದ ಡಾಕ್ಟರ್ ಶ್ರದ್ಧಾನಂದ ಸ್ವಾಮೀಜಿ ವಹಿಸಿ ಮಾತನಾಡುವಾಗ, ಮನುಷ್ಯನ ಜನ್ಮ ನಿಶ್ಚಿತ ಆತನ ಸಾವು ಅನಿಶ್ಚಿತ ಇದರ ಮಧ್ಯದಲ್ಲಿ ಮನುಷ್ಯನು ಮಾಡುತ್ತಿರುವ ಪ್ರತಿಯೊಂದು ಸೇವೆ ಕಾರ್ಯ ಇದರಲ್ಲಿ ಆತನಿಗೆ ಸಂತೋಷ ತರು ಅಂತ ಇನ್ನೊಬ್ಬರಿಗೆ ಅಂತ ಸೇವೆಗಳನ್ನು ಮಾಡಬೇಕು ಆದರೆ ಮಾತ್ರ ಆತನ ಜನ್ಮ ಸಾರ್ಥಕವಾಗುತ್ತದೆ. ಮನುಷ್ಯನ ಸಾವ ಅವನ ಕೈಯಲ್ಲಿ ಇಲ್ಲ ಭಾರತ ದೇಶ ಹಾಗೂ ಜಗತ್ತಿನಲ್ಲಿ ಎಷ್ಟು ಶ್ರೀಮಂತರು ಆಸ್ತಿಪಾಸ್ತಿ ಸಂಗ್ರಹಿಸಿದ್ದಾರೆ. ಆದರೆ ಆತನ ಆಸ್ತಿ ಆತನ ಜೊತೆ ಬರುವುದಿಲ್ಲ. ತಾವು ಬಾಳುವಾಗ ಇನ್ನೊಬ್ಬರಿಗೆ ಕಷ್ಟ ಕೊಡದೆ ಎಲ್ಲರೂ ಒಂದಾಗಿ ಬಾಳಬೇಕು. ಶ್ರೀ ಕೃಷ್ಣಾ ಮಹಾರಾಜರು ತಮ್ಮ ಅನ್ವಯಗಳನ್ನು ನಿರ್ಮಿಸಿದ್ದು ಅವರ ಭಕ್ತಿಯಿಂದ, ಶ್ರದ್ಧೆಯಿಂದ ಎಂದು ಡಾಕ್ಟರ್ ಶ್ರದ್ದಾನಂದ ಸ್ವಾಮೀಜಿ ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಯುವಕ ಸಂಘದ ಅಧ್ಯಕ್ಷ ಶಿವಗೌಡ ಕಾಗೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ನಾಂದನಿ, ಸುಭಾ ಸೇವಾಳೆ ಗುರುಗಳು, ಯೋಗಾನಂದ ಭಾರತಿ ಸ್ವಾಮೀಜಿ, ಹನಗಂಡಿಯ ಸಿದ್ದೇಶ್ವರ ಸ್ವಾಮೀಜಿ, ಹಲಬಾಳ ಗುರುಗಳು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಕುಸನಾಳ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೈಪಾಲ ಎರಂಡೋಲ್ಲೆ, ಚಿದಾನಂದ ಅಥಣಿ ಕಾರ್ಯಕ್ರಮದ ಬಗ್ಗೆ ಹೇಳುವಾಗ ಪ್ರತಿ ದಿನ ಸುಮಾರು 11 ಸಾವಿರ ಸದ್ಭಕ್ತರಿಗೆ ಬೇರೆ-ಬೇರೆ ರೀತಿಯ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ಸಂಜೆ ಊಟ ದಿನನಿತ್ಯ ನೀಡಲಾಗುತ್ತಿದೆ. ಜನರಿಗೆ ಜಿಲೇಬಿ, ಪುರಿ ಬಾಸುಂದಿ, ಹೋಳಗಿ, ಇಡ್ಲಿ, ಬಜಿ, ಶಾವಿಗೆ ಪಾಯ್ಸ್, ಹಾಲು ಹುಗ್ಗಿ, ಇಷ್ಟಲ್ಲದೆ ಉಪವಾಸ ದಿನದಂದು ಸಾಬುದಾನೆ ಬಗರ ನೀಡಲಾಗಿದೆ. ಎಲ್ಲ ಭಕ್ತರಿಗೆ ಸಿದ್ಧ ಆರೋ ಘಟಕದ ಕುಡಿಯುವ ನೀರು ಪುರೈಸಲಾಗಿದ್ದೆ. ಭಕ್ತರಿಗೆ ಅಡುಗೆ ನಿರ್ಮಿಸುವ ಭಟ್ಟ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ಜೈಪಾಲ್ ಮತ್ತು ಸಂಜು ಈ ಇಬ್ಬರು ಸುಮಾರು 50 ಜನರ ತಂಡದೊಂದಿಗೆ ಅಡಿಗೆ ನಿರ್ಮಿಸುತ್ತಿದ್ದಾರೆ. ಕುಸನಾಳ ಗ್ರಾಮದಲ್ಲಿ ಸತತವಾಗಿ ಏಳು ದಿನ ವಿಶೇಷ ಅನ್ನದಾಸೋಹ ಕಾರ್ಯಕ್ರಮ ಜರುಗುತ್ತಿದೆ.
ಸುಕುಮಾರ್ ಬನ್ನೂರೆ
ಇನ್ನು ನ್ಯೂಸ್ ಕಾಗವಾಡ