ಚಿಕ್ಕೋಡಿ;ಆತ್ಮರಕ್ಷಣೆಗಾಗಿ ಕರಾಟೆ ಕಲೆಯನ್ನು ಕರಗತ ಮಾಡಿಕೊಳ್ಳುವ ಮೂಲಕ ನಿರ್ಭಯವಾಗಿ ಓಡಾಡಬಹುದು ಎಂದು ಕಾಗವಾಡ ಪೊಲೀಸ್ ಠಾಣೆಯ ಪಿಎಸ್ಐ ಗಂಗಾ ಬಿರಾದಾರ ಹೇಳಿದರು.
ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಅಮೃತ ಗಾರ್ಡನ ಸಭಾಭವನದಲ್ಲಿ ಜಪಾನ್ ಎಮ್ಮಾ ಬುಕ್ಕಿ ಸಿತೋರಿಯಾ ಕರಾಟೆ ಡೋ ಅಸೋಸಿಯೇಶನ್ ಆಫ್ ಕರ್ನಾಟಕ ಹಾಗೂ ರಾಣಿ ಚನ್ನಮ್ಮ ಸೆಲ್ಪ್ ಡಿಫೆನ್ಸ ಕರಾಟೆ ಸ್ಪೋಟ್೯ ಅಸೋಸಿಯೇಶನ್ ಬೆಳಗಾವಿಯವರು ಏರ್ಪಡಿಸಿದ್ದ ಕರಾಟೆ ಶಿಬಿರ ಹಾಗೂ ಬ್ಲ್ಯಾಕ್ ಬೆಲ್ಟ್ ಕರಾಟೆ ಪಟುಗಳ ಹಾಗೂ ಪೋಷಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳು ಹಾಗೂ ಯುವಕರಲ್ಲಿ ಕರಾಟೆ ಕಲಿಕೆಯಲ್ಲಿ ಆಸಕ್ತಿ ಮೂಡುತ್ತಿದೆ. ವಿಶೇಷವಾಗಿ ಬಾಲಕಿಯರು, ಮಹಿಳೆಯರು ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಯುವ ಅಗತ್ಯವಿದೆ ಎಂದು ಅವರು ಹೇಳಿದರು. ಬಳಿಕ ಕರಾಟೆ ತರಬೇತಿದಾರಾದ ರಾಜು ಪಾಟೀಲಯವರು ಮಾತನಾಡಿ ಕರಾಟೆಯಿಂದ ಚಿಕ್ಕಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಎಲ್ಲ ಶಾಲೆಗಳಲ್ಲೂ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಚಿಕ್ಕೋಡಿಯ ಸಿಎಲ್ಇ ಸಂಸ್ಥೆಯ ಆಡಳಿತಾಧಿಕಾರಿಗಳಾದ ಎಸ್.ಆಯ್.ಬಿಸಕೊಪ್ಪಯವರು ಮಾತನಾಡಿ ನಮ್ಮ ಮಕ್ಕಳಿಗೆ ಕೇವಲ ಶಿಕ್ಷಣ ಕೊಟ್ಟರೆ ಸಾಲದು,ದೈಹಿಕವಾಗಿ ಬಲಿಷ್ಠವಾಗುವ ನಿಟ್ಟಿನಲ್ಲಿ ಕರಾಟೆ ಅಂತಹ ತರಬೇತಿ ನೀಡುವುದು ಅವಶ್ಯಕವಾಗಿದೆ. ಇದರಿಂದ ತಮ್ಮನ್ನು ತಾವು ಸಂರಕ್ಷಿಸಿಕೊಳ್ಳಲು ಸಾಧ್ಯ ಎಂದರು.ನಮ್ಮ ಸಿಎಲ್ಇ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ಕರಾಟೆ ತರಬೇತಿಯನ್ನು ಪ್ರಾರಂಭಿಸಿದೆ.ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಕರಾಟೆ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ರಾಷ್ಟ್ರೀಯ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಮನೋಜಕುಮಾರ ರಜಪೂತ,ಅನೀಲ ಬಜಂತ್ರಿ, ಕಿರಣ ಬಜಂತ್ರಿ, ದೀಪಕ ಪಾಟೀಲ, ಕುಮಾರ ಬಜಂತ್ರಿ, ಪ್ರಿಯಾಂಕಾ ಪಾಟೀಲ, ಚೇತನ ಬಜಂತ್ರಿ, ಗಣೇಶ ಸಾಳುಂಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…