ಜೋಳ ತುಂಬಿಕೊಂಡು ಸಾಗಿಸುತ್ತಿದ್ದ ಲಾರಿಯ ಇಂಜಿನಲ್ಲಿ ಬೆಂಕಿಯ ಕಾಣಿಸಿಕೊಂಡು ಲಾರಿ ಚಾಲಕರ ಸೇರಿ ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ಹುಬ್ಬಳ್ಳಿ ನವನಗರ ಎಪಿಎಂಸಿಯ ಹುಬ್ಬಳ್ಳಿಧಾರವಾಡ ಮುಖ್ಯ ರಸ್ತೆಯಲ್ಲಿ ಈಗಷ್ಟೇ ನಡೆದಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತವೊಂದು ತಪ್ಪಿದೆ.
ನವನಗರ ಎಪಿಎಂಸಿಯಿಂದ ಲಾರಿಯು ಜೋಳ ತುಂಬಿಕೊಂಡು ಧಾರವಾಡ ಕಡೆಗೆ ಸಾಗುವ ವೇಳೆ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಲಾರಿ ಚಲಿಸುತ್ತಿದ್ದ ವೇಳೆ ಇಂಜಿನ ಭಾಗದಲ್ಲಿ ಹೊಗೆ ಕಾಣಿಸಿಕೊಂಡು ಚಿಕ್ಕದಾಗಿ ಬೆಂಕಿ ಕಾಣಿಸಿಕೊಂಡಿದೆ. ಇದೇ ಲಾರಿಯ ಹಿಂಬದಿಯಿಂದ ಜಿಲಾನಿ ಖಾಜಿ ಯುವಕ ನೋಡಿ ಲಾರಿಯ ಚಾಲಕನಿಗೆ ನಿಲ್ಲಿಸಲು ತಿಳಿಸಿದ್ದಾನೆ.
ಕೂಡಲೇ ಲಾರಿ ನಿಲ್ಲಿಸಿ ಜಿಲಾನಿ ಯುವಕ ಸ್ಥಳೀಯರ ಸಹಾಯದೊಂದಿಗೆ ನೀರಿನ ಪೈಪ ತೆಗೆದುಕೊಂಡು ಬೆಂಕಿ ನಂದಿಸಿದ್ದಾನೆ. ಸ್ಥಳೀಯರು ಯುವಕನಿಗೆ ಸಾಥ ನೀಡಿದ್ದು, ಇವರೆಲ್ಲರ ಸಹಾಯ ಸಮಯ ಪ್ರಜ್ಣೆಯಿಂದ ಬಾರಿ ಅನಾಹುತ ತಪ್ಪಿದಂತಾಗಿದೆ. ಉತ್ತರ ಸಂಚಾರಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.