Chikkodi

ಡಿ.26 ರಿಂದ 28 ವರೆಗೆ ಯಕ್ಸಂಬಾದಲ್ಲಿ ಅದ್ದೂರಿಯಾಗಿ ಪ್ರೇರಣಾ ಉತ್ಸವ

Share

ಚಿಕ್ಕೋಡಿ:ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಪ್ರೇರಣಾ ಉತ್ಸವ 2024 ಕಾರ್ಯಕ್ರಮವನ್ನು ಡಿಸೆಂಬರ್ 26 ರಿಂದ 28 ರವರೆಗೆ ಹಮ್ಮಿಕೊಳ್ಳಲಾಗಿದೆ.

ಸತತ 13 ವರ್ಷಗಳಿಂದ ಯಕ್ಸಂಬಾ ಪಟ್ಟಣದಲ್ಲಿ ಪ್ರೇರಣಾ ಉತ್ಸವ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಗುರುವಾರ 26 ರಂದು ಬೆಳ್ಳಿಗೆ 9 ಗಂಟೆಗೆ ಜ್ಯೋತಿಬಾ ಪಲ್ಲಕ್ಕಿ ಮೆರವಣಿಗೆ,ಸಾಮೂಹಿಕ ಗುಗ್ಗಳೋತ್ಸವ, ಹಾಗೂ ಮನೆಯಂಗಳದಿ ರಂಗೋಲಿ ಸ್ಪರ್ಧೆ,ಅಂತರಶಾಲಾ ವಿಧ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು,ಸಾಯಂಕಾಲ 6 ಗಂಟೆಗೆ ಶಿಕ್ಷಣ ಸಂಸ್ಥೆಯ ಸಾಂಸ್ಕ್ರತಿಕ ಕಾರ್ಯಕ್ರಮ.

ದಿನಾಂಕ 27 ರಂದು ಸಿ. ಬಿ.ಎಸ್.ಇ. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು,ಮಹಿಳೆಯರಿಗಾಗಿ ಅಡುಗೆ ಹಾಗೂ ಮೆಹಂದಿ ಸ್ಪರ್ಧೆ,ಮಹಿಳೆಯರಿಗಾಗಿ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ,ಶಿಕ್ಷಣ ಸಂಸ್ಥೆಯ ಸಾಂಸ್ಕೃತಿಕ ಕಾರ್ಯಕ್ರಮ.

ಡಿ 28 ರಂದು ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳ ವೃತ್ತಿ ಮಾರ್ಗದರ್ಶನ, ಸ್ಪೆಷಲ್ ಒಲಂಪಿಕ್ಸ್ ಭಾರತ್ ಕರ್ನಾಟಕ ರಾಜ್ಯ ಮಟ್ಟದ ನೃತ್ಯೋತ್ಸವ ಕಾರ್ಯಕ್ರಮ ಹಾಗೂ ಜ್ಯೋತಿಪ್ರಸಾದ ಅವರ ಹುಟ್ಟು ಹಬ್ಬ ಸಮಾರಂಭ ಹಾಗೂ ಪ್ರೇರಣಾ ಪುರಸ್ಕಾರ ವಿತರಣೆ ಸಮಾರಂಭ ಜರುಗಲಿದೆ. ಈ ಮೇಲಿನ ಎಲ್ಲಾ ಕಾರ್ಯಕ್ರಮಗಳು ವಿವಿಧ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಲಿವೆ.ಎಂದು ಬಸವಪ್ರಸಾದ ಜೊಲ್ಲೆ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

Tags:

error: Content is protected !!