ಹುಕ್ಕೇರಿ ನಗರದ ಸುಣಗಾರ ಗಲ್ಲಿಯ ಮಹಿಳೆ ಲಲಿತಾ ನೀಲಜಗಿ ಹೊಟ್ಟೆ ನೋವು ತಾಳಲಾರದೆ ಆತ್ಮ ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸುಣಗಾರ ಗಲ್ಲಿಯ 35 ವರ್ಷದ ಮಹಿಳೆ ಲಲೀತಾ ಕಳೆದ ಹಲವಾರು ವರ್ಷಗಳಿಂದ ಹೋಟ್ಟೆ ನೂವು ಮತ್ತು ತಲೆ ನೋವಿನಿಂದ ಬಳಲುತ್ತಿದ್ದಳು ,ಚಿಕಿತ್ಸೆ ಪಡೆದರು ಸಹ ನೂವು ಗುಣವಾಗದ ಕಾರಣ ಮನನೊಂದು ಮದಮಕ್ಕನಾಳ ರಸ್ತೆಯ ಶಂಕರಗೌಡ ರವರ ಜಮಿನಿನ ಭಾವಿಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಳೆದ ಮೂರು ದಿನಗಳಿಂದ ಕಾಣೆಯಾದ ಬಗ್ಗೆ ಮಹಿಳೆಯ ಗಂಡ ಶಂಕರ ನಿಲಜಗಿ ಎಲ್ಲ ಕಡೆ ಹುಡುಕಾಡಿದ್ದಾನೆ. ಆದರೆ ಇಂದು ಬೆಳಗಿನ ಜಾವ ಬಾವಿಯಲ್ಲಿ ಶವ ತೆಲಾಡುತ್ತಿದ್ದನ್ನು ಕಂಡು ಪೋಲಿಸ್ ರಿಗೆ ಮಾಹಿತಿ ನಿಡಿದ್ದಾರೆ.
ಹುಕ್ಕೇರಿ ಪೋಲಿಸರು ಸ್ಥಳಕ್ಕೆ ಆಗಮಿಸಿ ಪಂಚನಾಮೆ ಜರುಗಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.