ಕರ್ನಾಟಕ ಸರಕಾರದಿಂದ ದ್ರಾಕ್ಷಿ ಬೆಳೆಗಾರರಿಗೆ ಅನ್ಯಾಯ ವಾಗುತ್ತಿದೆ, ದ್ರಾಕ್ಷಿ ಬೆಳೆಗಾರರ ಉಳಿವಿಗಾಗಿ ಯಾವುದೇ ಹೊಸ ಯೋಜನೆಗಳು ಬರ್ತಾಯಿಲ್ಲ, ದ್ರಾಕ್ಷಿ ಬೆಳೆಗಾರರಿಗೆ ದಯನೀಯ ಪರಿಸ್ಥಿತಿ ಬಂದು ಕಣ್ಣೀರು ಹಾಕ್ತಾಇದ್ದಾರೆ.
ಹೌದು ಒಣ ದ್ರಾಕ್ಷಿ ಬೆಲೆ ಕುಸಿದಿದೆ, ದ್ರಾಕ್ಷಿ ಒಣಗಿಸುವ ಶೆಡ್ಡುಗಳಿಗೆ ಯಾವುದೇ ಪರಿಹಾರದ ಸೌಲಭ್ಯವಿಲ್ಲ, ಪ್ರತಿಯೊಂದು ವಾಣಿಜ್ಯ ಬೆಳೆಗಳಿಗೆ ಸರಕಾರ ಬೆಂಬಲ ಬೆಲೆ ಕೊಡುತ್ತೆ ಆದರೆ ದ್ರಾಕ್ಷಿ ಬೆಳೆಗೆ ಯಾವುದೇ ರೀತಿಯಲ್ಲಿ ಬೆಂಬಲ ಬೆಲೆ ಸಿಗ್ತಾಯಿಲ್ಲ, ಬರುವ ಅಧಿವೇಶನದಲ್ಲಿ ದ್ರಾಕ್ಷಿ ಬೆಳೆಗೆ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕೆಂದು ಮನವಿ ಮಾಡ್ತೀವಿ, ನಷ್ಟ ಹಾನಿಗೆ ಸರಕಾರದ ವತಿಯಿಂದ ಪರಿಹಾರ ಸಿಗುವ ವ್ಯವಸ್ಥೆಯನ್ನು ಮಾಡಬೇಕು ಎಂದು ಮಾಜಿ ಶಾಸಕ ಶಹಜಹಾನ ಡೊಂಗರಗಾವ ಅವರು ಮನವಿ ಮಾಡಿದರು.
ಅವರು ಇಂದು ಪಟ್ಟಣದ ತಹಶಿಲ್ದಾರ ಕಛೇರಿಯಲ್ಲಿ ದ್ರಾಕ್ಷಿ ಬೆಳೆಗಾರರ ಸಂಘದ ವತಿಯಿಂದ ತಹಸೀಲ್ದಾರ್ ಅವರ ಮೂಲಕ ಸಿಎಂ ಹಾಗೂ ಪಿಎಂ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ ತಾಲೂಕಿನಲ್ಲಿ 20 ಸಾವಿರ ದ್ರಾಕ್ಷಿ ಬೆಳೆಯುವ ರೈತರು ಇದ್ದು, ಸುಮಾರು 15000 ಎಕರೆ ದ್ರಾಕ್ಷೆ ಬೆಳೆಯುತ್ತಿರುವ ರೈತರ ಕಣ್ಣೀರು ಒರೆಸುವ ಕೆಲಸವನ್ನು ಸರಕಾರ ಮಾಡಬೇಕು, ಇಲ್ಲವಾದರೆ ಸಾವಿರಾರು ಸಂಖ್ಯೆಯಲ್ಲಿ ಸೇರಿಕೊಂಡು ಉಗ್ರವಾದಂತಹ ಹೋರಾಟ ಮಾಡಬೇಕಾಗುತ್ತದೆ ಎಂದರು.
ಅನಂತರ ಮುಖಂಡ ಸಿದ್ದಪ್ಪ ಮುದಕನ್ನವರ ಅವರು ಮಾತನಾಡಿ ದ್ರಾಕ್ಷಿ ಬೆಳೆಗಾರರ ಸಂಕಷ್ಟವನ್ನು ವಿವರಿಸಿದರು. ಈ ವೇಳೆ ಭರತೇಶ ಕುದರಿ, ಗಿರೀಶ ಬುಟಾಳಿ, ಮಹಾಂತೇಶ ಅವಟಿ, ಸೇರಿದಂತೆ ಅನೇಕರಿದ್ದರು.