Chikkodi

ಫೆಬ್ರುವರಿ 10 ರಂದು ಚಿಕ್ಕೋಡಿಯಲ್ಲಿ ಗೊಲ, ಯಾದವ, ಹಣಬರ ಮಹಾ ಸಮಾವೇಶ:ವಿ.ಪ ಸದಸ್ಯ ಡಿ.ಟಿ. ಶ್ರೀನಿವಾಸ

Share

ಚಿಕ್ಕೋಡಿ:ಸಮುದಾಯದ ಮಕ್ಕಳ ಭವಿಷ್ಯ ಮತ್ತು ನಮ್ಮ ಅಸ್ತಿತ್ವಕ್ಕಾಗಿ ಒಗ್ಗಟ್ಟಿನಿಂದ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಗಬೇಕಿದೆ ಎಂದು ಹಣಬರ, ಗೊಲ್ಲ ಸಮಾಜ ಸಂಘಟನೆ ರಾಜ್ಯಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ ಹೇಳಿದರು.

2025 ರ ಫೆಬ್ರುವರಿ 10ರಂದು ಚಿಕ್ಕೋಡಿಯಲ್ಲಿ ನಡೆಯಲಿರುವ ಗೊಲ್ಲ, ಹಣಬರ, ಯಾದವ ಸಮಾಜದ ಮಹಾ ಸಮಾವೇಶದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಸಮಾಜವನ್ನು ಕಡೆಗಣಿಸಬಾರದೆಂಬ ಭಾವನೆ ಜನಪ್ರತಿನಿಧಿಗಳಲ್ಲಿ ಬರಬೇಕು. ನಾವು ಬಹುಸಂಖ್ಯೆಯಲ್ಲಿದ್ದೇವೆ ಎಂಬುದನ್ನು ಸಾಬೀತುಪಡಿಸಲು ಪಕ್ಷಾತೀತ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದರು. ಚಿತ್ರದುರ್ಗದ ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ ಮಾತನಾಡಿ, ”ಮಹಾ ಸಮಾವೇಶ ಕುರಿತು ಸಮುದಾಯದವರಲ್ಲಿ ಜಾಗೃತಿ ಮೂಡಿಸಲು ಜನವರಿ ತಿಂಗಳಲ್ಲಿ ಶ್ರೀ ಕೃಷ್ಣಮತ್ತು ಅಮಟೂರು ಬಾಳಪ್ಪ ಜ್ಯೋತಿಯೊಂದಿಗೆ ಎಲ್ಲೆಡೆ ಸಂಚರಿಸಲಾಗುವುದು,” ಎಂದರು.

ಇದೇ ಸಂಧರ್ಭದಲ್ಲಿ ಕೃಷ್ಣ ಮಂದಿರದ ನಿರ್ಮಾಣಕ್ಕೆ 10 ಗುಂಟೆ ಜಮೀನುನೀಡಿರುವ ಹಣಬರ ಸಮುದಾಯದ ಮುಖಂಡ ವಿಠ್ಠಲ
ಖೋತ ಅವರನ್ನು ಶ್ರೀಗಳು ಸನ್ಮಾನಿಸಿದರು. ಹಣಬರ ಸಮಾಜ ಸಂಘಟನೆ ರಾಜ್ಯ ಉಪಾಧ್ಯಕ್ಷ ವಿಠ್ಠಲ ಯಾದವ, ಶಿವಲಿಂಗ ಪೂಜೇರಿ, ಜಿಲ್ಲಾಧ್ಯಕ್ಷ ಶೀತಲ ಮುಂಡೆ, ರುದ್ರಪ್ಪಾ ಸಂಗಪ್ಪಗೋಳ, ಪ್ರಕಾಶ ಕೋಕಣೆ, ಶೇಖರ ಮುಂಡೆ, ಸುಧಾಕರ ಖಾಡ, ವಸಂತ ಕರಾಕಾಯಿ, ಭರತ ಜೋಗಳೆ, ಅಪ್ಪಾಸಾಬ ನಾಯಿಕ, ಸಚಿನ್ ಖೋತ್, ಸಂತೋಷ ಟವಳ, ಎಸ್.ಎಂ.ಚೌಗಲಾ, ಬಸವಣ್ಣ ಸಂಗಪ್ಪಗೋಳ, ರಾಮಾ ವಟಗೂಡೆ ಮತ್ತಿತರರು ಉಪಸ್ಥಿತರಿದ್ದರು.

Tags:

error: Content is protected !!