Belagavi

ಅಂದು ಗಾಂಧಿಜೀ ಇತಿಹಾಸ ನಿರ್ಮಿಸಿದರು…ಇಂದು ಖರ್ಗೆ ಇತಿಹಾಸ ಬರೆಯಲಿದ್ದಾರೆ

Share

ಬೆಳಗಾವಿ ಕಾಂಗ್ರೆಸ್ ಅಧಿವೇಶನ ದೇಶದ ಒಂದು ಇತಿಹಾಸ. ಅವತ್ತು ಜವಹರಲಾಲ್ ನೆಹರು, ಗಂಗಾಧರ್ ರಾವ್ ದೇಶಪಾಂಡೆ ಇಬ್ಬರೂ ಜನರಲ್ ಸೆಕ್ರೆಟರಿ ಇದ್ದರು. ಮಹಾತ್ಮಾ ಗಾಂಧಿಯವರನ್ನು ಕರೆದುಕೊಂಡು ಬಂದು, ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಕಾಂಗ್ರೆಸ್ ಅಧಿವೇಶನ ನಡೆಸಿದರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು.

ಸೋಮವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಳಗಾಯಿಂದಲೇ ಸ್ವಾತಂತ್ರ್ಯ ಚಳುವಳಿ ಆರಂಭವಾಯಿತು. ಅದರಂತೆ ನಾವು ಬೆಳಗಾವಿಯಿಂದಲೇ ಪ್ರಜಾಧ್ವನಿ ಆರಂಭಿಸಿದ್ದೇವು. ಗಾಂಧಿ ಬಾವಿಯ ನೀರನ್ನು ಚೆಲ್ಲಿ , ಕಸ ಗುಡಿಸಿ ರಾಜ್ಯದಲ್ಲಿ 136 ಸೀಟ್ ಬಂದಿವೆ. ಮತ್ತೆ ಇಲ್ಲಿಂದಲೇ ದೇಶಕ್ಕೆ, ರಾಜ್ಯಕ್ಕೆ ಮುಂದೆ ಜನರನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಸಮಾವೇಶ ನಡೆಯಲಿದೆ ಎಂದರು. ಹೊಸ ದಿಕ್ಕಿಗೆ ಈ ದೇಶವನ್ನ ತೆಗೆದುಕೊಂಡು ಹೋಗಬೇಕು. ಅಂದು ಗಾಂಧಿ, ಇಂದು ಖರ್ಗೆ ಸಾಹೇಬರು ಇದ್ದಾರೆ. ಹೊಸ ದಿಕ್ಕಿಗೆ ತೆಗೆದುಕೊಂಡು ಹೋಗಲು ಬೇಕಾದ ಕೆಲಸ ಆಗಲಿದೆ. ಹೊಸ ಅಧ್ಯಾಯವನ್ನ ಬೆಳಗಾವಿಯಿಂದ ಪ್ರಾರಂಭವಾಗಲಿದೆ ಎಂದರು.

ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಕ್ಕೆ ಎಲ್ಲರಿಗೂ ಆಹ್ವಾನವಿದೆ. ಇದೊಂದು ಸರ್ಕಾರಿ ಕಾರ್ಯಕ್ರಮ ಆಗಿರಲಿದೆ. ಎಲ್ಲಾ ಪಕ್ಷದ ಶಾಸಕರು, ಸಂಸದರಿಗೆ ಆಹ್ವಾನಿಸಲಾಗುತ್ತಿದೆ‌. ಸ್ವಾತಂತ್ರ್ಯ ಹೋರಾಟಗಾರರನ್ನ ಆಹ್ವಾನ ಮಾಡುತ್ತಿದ್ದೇವೆ. ಗಂಗಾಧರ್ ರಾವ್ ದೇಶಪಾಂಡೆ ಕುಟುಂಬಕ್ಕೆ ಆಹ್ವಾನ ಮಾಡುತ್ತಿದ್ದೇವೆ.ಕೆಪಿಸಿಸಿ ಅಧ್ಯಕ್ಷರು, 140 ಸಂಸದರು ಸೇರಿ ಎಲ್ಲಾ ನಾಯಕರು ಬೆಳಗಾವಿ ಗೆ ಬರುತ್ತಾರೆ ಎಂದರು. ಮೀಟಿಂಗ್ ಬರೀ ವರ್ಕಿಂಗ್ ಕಮಿಟಿಯವರಿಗೆ ಮಾತ್ರ ಅವಕಾಶ ಇದೆ. ಎರಡನೇ ದಿನದ ಸಮಾವೇಶಕ್ಕೆ ಅವರು ಬರಲಿದ್ದಾರೆ ಎಂದರು.

Tags:

error: Content is protected !!