ನಗರಗಳಲ್ಲಿ ಬಹಳ ಪ್ರಮುಖವಾಗಿ ಪಾಲಿಕೆಗಳು ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು. ಆದರೆ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ಈ ವಿಚಾರದಲ್ಲಿ ನಿರ್ಲಕ್ಷ್ಯಕ್ಕೆ ಕೈಗನ್ನಡಿ ಎಂಬಂತೆ , ಒಂದು ಉದ್ಯಾನವನದ ಅಕ್ಕಪಕ್ಕದ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳು ಸೇರಿ ಉದ್ಯಾನವನಕ್ಕೆ ತೆರಳುವ ವಾಯು ವಿಹಾರಿಗಳು ಪಾಲಿಕೆಯ ವಿರುದ್ಧ ನಿತ್ಯವು ಹಿಡಿಶಾಪ ಹಾಕುತ್ತಿದ್ದಾರೆ.
ಹೌದು,ಧಾರವಾಡ ಸಾಧನಕೇರಿ ಉದ್ಯಾನವನದ ಅಕ್ಕಪಕ್ಕದ ರಸ್ತೆಯಲ್ಲಿನ ತ್ಯಾಜ್ಯ ಸಾಮ್ರಾಜ್ಯವೆ ಸೃಷ್ಟಿಯಾಗಿದ್ದು, ರಸ್ತೆಯ ಅಕ್ಕಪಕ್ಕ ಸುರಿದ ತ್ಯಾಜ್ಯದ ದುರವಾಸನೆ ವಾಯು ವಿಹಾರಿಗಳಿಗೆ ಸ್ವಾಗತ ಮಾಡುತ್ತಿದೆ. ಸ್ಥಳೀಯವಾಗಿ ನೂರಾರು ಕುಟುಂಬಗಳು ವಾಸ ಮಾಡುತ್ತಿದ್ದು, ಎಲ್ಲೆಂದರಲ್ಲಿ ಉದ್ಯಾನವನದ. ರಸ್ತೆಗಳಿಲ್ಲಿ ಕಸ ತಂದು ಸುರಿಯುತ್ತಿರುವುದ ಅಲ್ಲಿಯ ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಹುಟ್ಟಿಸಿದೆ. ಕಸ ವಿಲೇವಾರಿಗಾಗಿಯೇ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಕೋಟಿ ಕೋಟಿ ಅನುದಾನಖರ್ಚು ಮಾಡುತ್ತದೆ.
ಆದರೆ ಜನನಿಬಿಡ ಪ್ರದೇಶದಲ್ಲಿನ ಉದ್ಯಾನವನಕ್ಕೆ ಜನ ಮುಗಿ ಮುಚ್ಚಿಕೊಂಡು ಉದ್ಯಾನವನಕ್ಕೆ ತೆರಳುವ ಪರಿಸ್ಥಿತಿ ಒದಗಿ ಬಂದಿದೆ. ಇನ್ನೂ ರಸ್ತೆ ಪಕ್ಕದ ಕಸದ ಕಿರಿಕಿರಿಯಿಂದ ತಪ್ಪಿಸಿಕೊಂಡು ಉದ್ಯಾನವನಕ್ಕೆ ತೆರಳಿದರಿಂದ ಈ ತ್ಯಾಜ್ಯ ಕೊಳೆತ ವಾಸನೆಯಿಂದ ಒಳ ಕುರಲು ಆಗುತ್ತಿಲ್ವಂತೆ. ಜತೆಗೆ ಸ್ಥಳೀಯ ನಿವಾಸಿಗಳು ಈ ಕಸದ ದುರವಾಸನೆಯಿಂದ ಹೈರಾಣಾಗಿದ್ದು, ಪಾಲಿಕೆಯ ವಿರುದ್ಧ ನಿತ್ಯವು ಹಿಡಿಶಾಪ ಹಾಕುವುದೇ ವೃತಿಯಾಗಿ ಬಿಟ್ಟಿದೆಯಂತೆ.
ಸಾಧನಕೇರಿ ಉದ್ಯಾನವನದ ಅಕ್ಕಪಕ್ಕದ ಅಂಗಡಿಗಳು ಸೇರಿ ಇಲ್ಲಿಕಸ ಹಾಕುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದರ ಜತೆಗೆ, ಈ ತ್ಯಾಜ್ಯವನ್ನು ಡಂಪ ಮಾಡಿ ಉತ್ತಮ ವಾತಾವರಣ ನಿರ್ಮಿಸುವಂತೆ ಸ್ಥಳೀಯರು ಪಾಲಿಕೆ ಮನವಿ ಮಾಡುತ್ತಿದ್ದು, ಇದಕ್ಕೆ ಪಾಲಿಕೆ ಎಷ್ಟರಮಟ್ಟಿ ಸ್ಪಂದನೆ ಮಾಡುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಾಗಿದೆ.