ಕಾಗವಾಡ – ಸಮಾಜದಲ್ಲಿ ಅನೇಕರು ಶ್ರೀಮಂರುಇದ್ದಾರೆ, ಅವರ ಹತ್ತಿರ ಸಂಪತ ,ಆಸ್ತಿ, ಐಶ್ವರ್ಯ, ಇದೆ ಆದರೆ ಬಡ ಕುಟುಂಬಗಳಿಗೆ ದಾನ ಮಾಡುವ ಧೈರ್ಯ ಅವರಲ್ಲಿ ಇರುವುದಿಲ್ಲ ಆದರೆ ಕಳೆದ ಅನೇಕ ವರ್ಷಗಳಿಂದ ಶೈಕ್ಷಣಿಕ ಸಂಸ್ಥೆಗಳಿಗೆ ಬಡ ಕುಟುಂಬಗಳಿಗೆ ಹಣ, ವಸ್ತ್ರ, ಶೈಕ್ಷಣಿಕ ಸಾಹಿತ್ಯ ದಾನ ಮಾಡುವ ದಾನ ವೀರ ಮಹಾವೀರ ಪಡನಾಡ ಇವರು ಏಕೈಕರಿದ್ದಾರೆ ಎಂದು ಐನಾಪುರದ ಹಿರಿಯ ನ್ಯಾಯವಾದಿಗಳು ಪದ್ಮಾವತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಜೆಯ ಕುಚನೂರೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರವಿವಾರರಂದು ಐನಾಪುರ ಜೈನ ಮಂದಿರದ ಸಭಾಭವನದಲ್ಲಿ ದಾನವೀರ ಮಹಾವೀರ ಪಡನಾಡ ದಂಪತಿಗಳಿಂದ ಅನೇಕರಿಗೆ ದಾನ ನೀಡುವ ಕಾರ್ಯಕ್ರಮ ಜರಗಿತು. ಸಮಾರಂಭದಲ್ಲಿ ಬೆಳಗಾವಿಯ ಜೈನ ಯುವಕ ಮಂಡಲ ಟ್ರಸ್ಟ್ ಈ ಸಂಸ್ಥೆಗೆ 11 ಲಕ್ಷ ರೂಪಾಯಿ ದಾನವಾಗಿ ನೀಡಿದರು, ಇದೇ ರೀತಿ ಕಾಗವಾಡದ ಶ್ರೀ ವಿದ್ಯಾಸಾಗರ್ ಶಿಕ್ಷಣ ಸಂಸ್ಥೆಗೆ 5 ಲಕ್ಷ, ಹೀಗೆ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಿಗೆ ನೆಗದು ಹಣ ನೀಡಿ ಉಭಯ ದಾಂಪತಿಗಳು ದಾನವಾಗಿ ನೀಡಿದರು, ಇದೇ ರೀತಿ ಜೈನ ಸಮಾಜದ 150 ಜನ ಅರ್ಚಕರಿಗೆ , ಬೇರೆ ಬೇರೆ ಮಹಿಳಾ ಮಂಡಲ ಸಂಘಟನೆಗಳಿಗೆ, ಮಹಿಳೆಯರಿಗೆ ವಸ್ತ್ರ ದಾನ ಹಣದಾನ ಮಾಡಿದರು. ಇದನ್ನು ಕಂಡಿತ ಅನೇಕರು ಉಭಯ ಕುಟುಂಬದವರಿಗೆ ನಿಮ್ಮಿಂದ ಹೀಗೆ ಸೇವೆ ಆಗಲಿ ಎಂದು ಹಾರೈಸುತ್ತಿದ್ದರು.
ದಾನ ವೀರ ಮಹಾವೀರ ಪಡನಾಡ ಮಾತನಾಡಿ ಕಳೆದ ಅನೇಕ ವರ್ಷಗಳಿಂದ ನಮ್ಮ ತಂದೆ ಅನೇಕ ಕಡುಬುಡುವ ಕುಟುಂಬಗಳಿಗೆ ಧಾನ್ಯ ವಸ್ತ್ರ ದಾನ ನೀಡುತ್ತಿದ್ದರು ಅದೇ ರೀತಿ ನಾನು ರೈತಾಪಿ ಕುಟುಂಬದವನು ನನ್ನ ಗದ್ದೆಯಲ್ಲಿ ಬೆಳೆದ ಧಾನ್ಯ ನನಗೆ ಬಳಸುವಷ್ಟು ಕಾಯ್ದುಕೊಂಡು ಉಳಿದ ಎಲ್ಲಾ ದಾನವಾಗಿ ನೀಡುತ್ತೇನೆ ನನಗೆ ಇದು ಒಂದು ರೀತಿ ಸಂತಸ ತರುತ್ತದೆ ಎಂದರು.
ಸಮಾರಂಭದಲ್ಲಿ ಐನಾಪುರದ ಹಿರಿಯರಾದ ದಾದಾ ಪಾಟೀಲ್, ಸುಭಾಷ್ ಪಾಟೀಲ್, ಚಮನ್ ರಾವ್ ಪಾಟೀಲ್, ರಾಜ ಗೌಡ ಪಾಟೀಲ್, ಡಿ ಡಿ ಮೆಕ್ಕನ ಮರಡಿ, ಶ್ರೀಮತಿ ಪುಷ್ಪ ತಾಯಿ ಪಾಟೀಲ್ ಸೇರಿದಂತೆ ಅನೇಕರು ಇದ್ದರು, ಜೈನ ಸಮಾಜದ ಎಲ್ಲ ಆರ್ಚಕರು ಹಿರಿಯರು ಒಂದುಗೂಡಿ ಮಹಾವೀರ ಪಡನಾಡ ಅವರ ಧರ್ಮಪತ್ನಿ ಕಲ್ಪನಾ ಬಡನಾಡ ಇವರನ್ನು ಸನ್ಮಾನಿಸಿ ಅಭಿನಂದಿಸಿದರು. ವಿಜಯ್ ಹುದ್ದಾರ ಕಾರ್ಯಕ್ರಮ ಸಂಯೋಜಿಸಿ ವಂದಿಸಿದರು.
ಸುಕುಮಾರ್ ಬನ್ನೂರೆ
ಇನ್ ನ್ಯೂಸ್ ಕಾಗವಾಡ