Kagawad

ಕುಸನಾಳ ಗ್ರಾಮದಲ್ಲಿ ಜ್ಞಾನೇಶ್ವರಿ ಪಾರಾಯಣ ಕಾರ್ಯಕ್ರಮ ಮುಕ್ತಾಯ

Share

ಕಳೆದ ಏಳು ದಿನಗಳಿಂದ 5,001 ಸದ್ಭಕ್ತರು ಏಕಕಾಲಕ್ಕೆ ಜ್ಞಾನೇಶ್ವರಿ ಪಾರಾಯಣ ಮಾಡುತ್ತಿದ್ದರು ಈ ಕಾರ್ಯಕ್ರಮದ ರವಿವಾರ ಬೆಳಗ್ಗೆ ಮುಕ್ತಾಯಗೊಂಡಿತು.
ರವಿವಾರ ಬೆಳಗ್ಗೆ ಕುಸನಾಳ ಗ್ರಾಮದಲ್ಲಿ ಪಾರಾಯಣ ಕಾರ್ಯಕ್ರಮದ ಮುಖ್ಯ ಆಯೋಜಕರನ್ನು ಒಂದುಗೂಡಿಸಿ ಅವರ ಸೇವೆ ಕೊಂಡಾಡಿ ಸನ್ಮಾನಿಸುವ ಕಾರ್ಯಕ್ರಮ ಜರಗಿತು.

ಜ್ಞಾನೇಶ್ವರಿ ಪಾರಾಯಣ ಕಾರ್ಯಕ್ರಮ ಕೈಗೊಳ್ಳಲು ಪ್ರವಚನಕಾರ ಸುಭಾಷ ಸೇವಾಳೆ ಗುರುಗಳನ್ನು ಅದೇ ರೀತಿ ಪ್ರಭು ವಾಸ್ಕರ್ ಮಹಾರಾಜರನ್ನು ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮ ಯಶಸ್ವಿಗೊಳಿಸಲು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಅಶೋಕ್ ನಾಮನಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೈಪಾಲ ಗ್ಯಾರಂಡೋಲೆ, ಗ್ರಾಮಪಮ್ಮ ಸದಸ್ಯ ಚಿದಾನಂದ ಅಥಣಿ ಎಲ್ಲ ಸದಸ್ಯರು ಪ್ರವಚನಕಾರರು ಮತ್ತು ನಿರಂತರವಾಗಿ ಏಳು ದಿನ ಸೇವೆ ನೀಡಿದ ಎಲ್ಲಾ ಸೇವಕರನ್ನು ಒಂದುಗೂಡಿಸಿ ಸನ್ಮಾನಿಸಿ ಅಭಿನಂದಿಸಲಾಯಿತು. ಅನೇಕ ರೈತರು ಕಾರ್ಯಕ್ರಮದಲ್ಲಿ ತಮ್ಮ ಗದ್ದೆಯಲ್ಲಿ ಬೆಳೆದ ಕಾಯಿ ಪಲ್ಲೆ ದಾನವಾಗಿ ನೀಡಿದ್ದಾರೆ ಉಗಾರದ ಹೂಸುರೆ ಬಂಧುಗಳು ಶುದ್ಧ ಕುಡಿಯುವ ನೀರಿನ ಪೂರೈಸಿದರು ಅವರಿಗೆ ಗೌರವಿಸಲಾಯಿತು.

ಕಳೆದ ಏಳು ದಿನಗಳಿಂದ ನಿರಂತರವಾಗಿ 11000 ಜನ ಒಂದುಗೂಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಆದರು ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ ಇದು ಒಂದು ವಿಠ್ಠಲನ ಕೃಪೆ ಎಂದು ಜೈಪಾಲ ಯಾರನ್ಡೋಲೆ ಹೇಳಿದರು ಕೋಳಿ ಗುಡ್ಡ ಮಠದ ಅಮರೇಶ್ವರ ಮಹಾರಾಜರು ಹಾಗೂ ಇನ್ನುಳಿದ ಸ್ವಾಮೀಜಿಗಳು ಇವರು ಸಾನಿಧ್ಯ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಳೆದ ಎರಡು ವರ್ಷಗಳಿಂದ ಕಾರ್ಯಕ್ರಮದ ಬಗ್ಗೆ ರೂಪರೇಷೆ ಮಾಡಲಾಗುತ್ತಿತ್ತು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ನಾಂದನಿ ಹೇಳಿದರು.

ಸುಕುಮಾರ್ ಬನ್ನೂರೆ
ಇನು ನ್ಯೂಸ್ ಕಾಗವಾಡ

Tags:

error: Content is protected !!