Chikkodi

ಡಿಸೆಂಬರ 24 ಕ್ಕೆ ಚಿಕ್ಕೋಡಿಯ ಬಿ.ಕೆ.ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ

Share

ಚಿಕ್ಕೋಡಿ: ಡಿಸೆಂಬರ 24 ರಂದು ಕೆಎಲ್ಇ ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪಿಯುಸಿ ಮತ್ತು ಹೈ ಸ್ಕೂಲ್ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ – “ಕ್ಯೂರಿಯಾಸಿಟಿ ಕಾರ್ನಿವಲ್” ಮತ್ತು “ವಿಗ್ನ್ಯಾನಂ 3.0” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ ತಿಳಿಸಿದ್ದಾರೆ.

ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಕಾರ್ಯಕ್ರಮದಲ್ಲಿ ಕೆ.ಎಲ್.ಇ ಸಂಸ್ಥೆ, ನಿರ್ದೆಶಕ ಮಹಾಂತೇಶ. ಎಂ. ಕವಟಗಿಮಠ ಮತ್ತು . ಬಿ.ಆರ್. ಪಾಟೀಲ್, ಹಾಗೂ ಡಾ. ಎಂ.ಟಿ. ಕುರಾಣಿ, ಮಾಜಿ ಆಜೀವ ಸದಸ್ಯರು, ಕೆಎಲ್ಇ ಸಂಸ್ಥೆ, ಬೆಳಗಾವಿ ಮತ್ತು ಎಲ್‌.ಜಿ.ಬಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ‌.

ಚಿಕ್ಕೋಡಿ ಭಾಗದಿಂದ ಸುಮಾರು 500 ವಿದ್ಯಾರ್ಥಿಗಳ ಭಾಗವಹಿಸುವರು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಕಾಶ್ ಕೋಳಿ ಉಪಸ್ಥಿತರಿದ್ದರು.

Tags:

error: Content is protected !!