ಕಿತ್ತೂರು ಕ್ಷೇತ್ರ ತಿಗಡಿ ಗ್ರಾಮದಲ್ಲಿ 1008 ಶಾಂತಿನಾಥ ದಿಗಂಬರ ಜೈನ ಮಂದಿರ ಟ್ರಸ್ಟ್ ಸಮುದಾಯ ಭವನದ ನಿರ್ಮಾಣಕ್ಕೆ ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ್ ಭೂಮಿ ಪೂಜೆ ನೆರವೇರಿಸಿದರು. ಮೊದಲಿಗೆ ಶಾಸಕ ಬಾಬಾಸಾಹೇಬ್ ಪಾಟೀಲರಿಗೆ ತಿಗಡಿ ಗ್ರಾಮದ ದಿಗಂಬರ ಜೈನ ಸಮುದಾಯ ಜನರು ಬಾಬಾಸಾಹೇಬ ಪಾಟೀಲರಿಗೆ ಆರತಿಯನ್ನು ಬೆಳಗಿ ಆದರದಿಂದ ಸ್ವಾಗತ ಮಾಡಿಕೊಂಡರು. ನಂತರ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಬಾಬಾಸಾಹೇಬ್ ಪಾಟೀಲ್ ಅವರು ಅಲ್ಪಸಂಖ್ಯಾತರ ಇಲಾಖೆಯಿಂದ ತಿಗಡಿ ಗ್ರಾಮಕ್ಕೆ ಸುಮಾರು 50 ಲಕ್ಷ ರೂಪಾಯಿಗಳನ್ನು ಸರ್ಕಾರ ನೀಡಿದೆ. 50 ಲಕ್ಷ ರೂಪಾಯಿಗಳನ್ನು ಸರಿಯಾದ ರೀತಿಯಲ್ಲಿ ಸಮುದಾಯಕ್ಕೆ ಬಳಸಿಕೊಳ್ಳಬೇಕು. ಕಿತ್ತೂರು ಕ್ಷೇತ್ರದ ಅಲ್ಪಸಂಖ್ಯಾತ ಸಮುದಾಯಗಳಾದ ಜೈನ ಮತ್ತು ಮುಸ್ಲಿಂ ಸಮುದಾಯದ ಏಳ್ಗೆಗಾಗಿ ಹೆಚ್ಚಿನ ಅನುದಾನ ತರಲು ಶ್ರಮಿಸುತ್ತಿದ್ದೇನೆ. ಕಿತ್ತೂರು ಕ್ಷೇತ್ರದಲ್ಲಿ ಸಾಕಷ್ಟು ಸಮುದಾಯ ಭವನಗಳ ಈಗಾಗಲೇ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅಚ್ಚುಕಟ್ಟಾಗಿ ನಿರ್ಮಾಣವಾಗುತ್ತಿವೆ ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್, ವಿನೋದ ದೊಡ್ಡಣ್ಣವರ, ಸುನಿಲ್ ಹನುಮಣ್ಣವರ ತವನಪ್ಪ ಅಷ್ಟಗಿ ರಾಜೇಂದ್ರ ಜಕ್ಕನ್ನವರ್ ಪುಷ್ಪಕ ಹನುಮಣ್ಣವರ್ ಅಮೃತ್ ಕುಡಚಿ ಯಲ್ಲಪ್ಪ ಮೇಲಿನಮನಿ ಅಭಯ್ ಅವಲಕ್ಕಿ ತಿಗಡಿ ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷರು ಕಲ್ಪನಾ ಡೊಂಕನ್ನವರ ಪಿಡಿಯೋ ಅಧಿಕಾರಿ ಹಾಗೂ ಗ್ರಾಮ ಪಂಚಾಯತಿಯ ಸದಸ್ಯರು ಮತ್ತು ಜೈನ ಸಮಾಜ ಬಾಂಧವರು ಉಪಸ್ಥಿತರಿದ್ದರು.
ವರದಿಗಾರರು
ಶಾನೂಲ ಮ
ಬೈಲಹೊಂಗಲ