ಬಡ ಕಾರ್ಮಿಕರು ಸೇರಿ ಶ್ರಮಿಕ ವರ್ಗದವರ ಹೊಟ್ಟೆ ತುಂಬಿಸಬೇಕಾಗಿದ್ದ ಇಂದಿರಾ ಕ್ಯಾಂಟೀನ್ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಪಾಳು ಬಿದ್ದ ಸ್ಥಿತಿ ತಲುಪಿದೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸ್ವ ಕ್ಷೇತ್ರವಾದ ಕಲಘಟಗಿ ಪಟ್ಟನಲ್ಲಿ ಇಂದಿರಾ ಕ್ಯಾಂಟೀನ್ ಈಗ ಬೀದಿ ನಾಯಿ ಸೇರಿ ಪುಡಾರಿಗಳ ಅಡ್ಡೆಯಾಗಿ ಪರಿವರ್ತನೆಯಾಗಿದೆ.
ಹೌದು ಕಲಘಟಗಿ ಪಟ್ಟಣದಲ್ಲಿ ಬಡವರಿಗಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತಿತ್ತು. ಕಟ್ಟಡ ಕೂಡಾ ಬಹುತೇಕ ನಿರ್ಮಾಣವಾಗಿದ್ದು, ಪೈನಲ್ ಟಚ್ ಬಾಕಿ ಉಳಿದಿದೆ. ಆದರೆ ಫೈನಲ್ ಟಚ್ ಬಾಕಿ ಉಳಿದಿದ್ದ ಸಂದರ್ಭದಲ್ಲಿ ಈಗ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾರ್ಯ ಸ್ಥಗಿತವಾಗಿದೆ. ಇದರಿಂದಾಗಿ ಈಗ ಬಡವರ ಹಸಿವು ನಿಗಿಸಬೇಕಾಗಿದ್ದ ಇಂದಿರಾ ಕ್ಯಾಂಟೀನ್ ಪಾಳು ಬಿದಿದ್ದು, ನಾಯಿ ಸೇರಿದಂತೆ ಪುಡಾರಿಗಳ ಅಕ್ರಮ ಅಡ್ಡೆಯಾಗಿ ಪರಿವರ್ತನೆಯಾಗಿದೆ. ಇನ್ನೂ ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೂ ತೊಂದರೆ ಆಗುತ್ತಿದೆ.
ತಡ ರಾತ್ರಿ ವೇಳೆಯಲ್ಲಿ ಈ ಕಟ್ಟಡವನ್ನು ಪುಡಾರಿ ಯುವಕರು ಬೇರೆ ಬೇರೆ ಕೆಲಸಗಳಿಗೆ ಕಟ್ಟಡ ಬಳಕೆ ಮಾಡುತ್ತಿದ್ದಾರಂತೆ. ಈಗಲಾದ್ರೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್, ಜಿಲ್ಲಾಡಳಿತ, ತಾಲೂಕು ಆಡಳಿತ, ಈ ಕಡೆ ಗಮನ ಹರಿಸಿ ಇಂದಿರಾ ಕ್ಯಾಂಟೀನ್ ಕೆಲಸ ಪೂರ್ಣ ಮಾಡಿ ಬಡ ಶ್ರಮಿಕ ವರ್ಗದವರ ಹಸಿವು ನಿಗಿಸೋ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.