ಶೋಷಿತ ಸಮಾಜಕ್ಕೆ ಅಕ್ಷರದ ಕ್ರಾಂತಿಯನ್ನು ಮಾಡಿದಂತಹ ಸಾವಿತ್ರಿಬಾಯಿ ಫುಲೆ ಅವರ 193 ನೇ ಜಯಂತಿ ಅಂಗವಾಗಿ ಜನವರಿ 12 ರಂದು ಮುಂಜಾನೆ 11 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ನಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಭೀಮವಾದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಸಂಜು ಕಾಂಬಳೆ ಹೇಳಿದರು.
ಚಿಕ್ಕೋಡಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು ಈ ಕಾರ್ಯಕ್ರಮಕ್ಕೆ ಈ ಭಾಗದಿಂದ 200 ಕ್ಕಿಂತ ಹೆಚ್ಚಿನ ಜನರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದೇವೆ. ರಾಜ್ಯ ಸಂಚಾಲಕರಾದ ಬಿ.ಎನ್ ವೆಂಕಟೇಶ ಹಾಗೂ ರಾಜ್ಯದ ಕೋರ್ ಕಮಿಟಿ ಅಧ್ಯಕ್ಷರಾದ ಸಿದ್ಧಾರ್ಥ ಶಿಂಗೆ ಅವರ ನೇತ್ರತ್ವದಲ್ಲಿ ಬೃಹತ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬುದ್ಧಿಜೀವಿಗಳಾದ ಜ್ಞಾನಪ್ರಕಾಶ ಸ್ವಾಮೀಜಿ,ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ಸಚಿವರಾದ ಮಹದೇವಪ್ಪನವರು ಸೇರಿದಂತೆ ಇನ್ನುಳಿದ ಗಣ್ಯರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಸ್ವ ಇಚ್ಛೆಯಿಂದ ಭಾಗವಹಿಸಬೇಕೆಂದು ಮನವಿಯನ್ನು ಮಾಡಿಕೊಂಡರು.
ಈ ಸಂಧರ್ಭದಲ್ಲಿ ಆನಂದ ಅರಬಳ್ಳಿ,ಈರಪ್ಪ ಸಂತಾಗೋಳ,ರಾಜು ಗೌರಾಗೋಳ್,ಬಾಬು ರೂಗೆ,ಅನೀಲ ಕಾಂಬಳೆ,ಭೀಮಪ್ಪ ತಳಕೇರಿ,ಪರಶುರಾಮ ತಳಕೇರಿ,ಅಪ್ಪಾಸಾಹೇಬ ಗೌರಾಗೋಳ,ಅಣ್ಣಪ್ಪಾ ಅಸೋದೆ,ಸುಖದೇವ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.