ರಸ್ತೆ ಅಪಘಾತದಲ್ಲಿ ಚಿಕ್ಕೋಡಿ ಪೊಲೀಸ್ ಠಾಣೆಯ ಪೇದೆ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪೊಲೀಸ ಪೇದೆ ಮಂಜುನಾಥ್ ಸತ್ತಿಗೇರಿ (26) ಸಾವನ್ನಪ್ಪಿರುವ ಘಟನೆ ನಡೆದಿದೆ..ಮೂಲತಃ ಮಹಾಲಿಂಗಪುರ ಹತ್ತಿರದ ಕೆಸರಗೊಪ್ಪ ಗ್ರಾಮದ ನಿವಾಸಿ ಮಂಜುನಾಥ ಕಳೆದ 5 ವರ್ಷಗಳಿಂದ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಇವತ್ತು ಕುಡಚಿಯಿಂದ ಬೈಕ್ ಮೇಲೆ ಬರುವಾಗ ಅಂಕಲಿ ರಾಯಬಾಗ ರಸ್ತೆಯಲ್ಲಿ ನಂದಿಕುರಳಿ ಕ್ರಾಸ್ ಹತ್ತಿರ ಎರಡು ಬೈಕುಗಳ ನಡುವೆಯಾದ ಅಪಘಾತದಲ್ಲಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.ಮಂಜುನಾಥಯವರು ಪ್ರಾಮಾಣಿಕ, ಎಲ್ಲರ ಜೊತೆ ಒಳ್ಳೆ ಒಡನಾಟ ಇರುವ ವ್ಯಕ್ತಿ, ಅಪಾರ ಸ್ನೇಹ ಬಳಗವು ಹೊಂದ್ದಿದರು. ಆರು ತಿಂಗಳ ಹಿಂದೆ ಮದುವೆಯಾಗಿದ್ದರು. ಆಕಸ್ಮಿಕವಾಗಿ ಅವರ ಸಾವಿನಿಂದ ಅವರ ಕುಟುಂಬಕ್ಕೆ, ಪೊಲೀಸ್ ಇಲಾಖೆಗೆ, ಸ್ನೇಹ ಬಳಗಕ್ಕೆ ಭಾರಿ ಆಘಾತ ಉಂಟಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.