ಹುಬ್ಬಳ್ಳಿ-ಧಾರವಾಡ ಬಿಆರ್’ಟಿಎಸ್ ಚಿಗರಿ ಬಸ್ ನಿಂದ ಮತ್ತೊಂದು ಅವಘಡ ಸಂಭವಿಸಿದ್ದು ಅಪಘಾತದ ಎದೆ ಝಲ್ ಎನಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಿಗರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಲ್ ನಿನ್ನೆ ಹುಬ್ಬಳ್ಳಿಯ ಬೈರಿದೇವರಕೊಪ್ಪದ ಬಳಿ ಚಿಗರಿ ಬಸ್ ಗ್ರಾನೈಟ್ ಅಂಗಡಿಗೆ ಗುದ್ದಿದೆ. ಅತೀ ವೇಗದ ಚಾಲನೆ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಗ್ರಾನೈಟ್ ಅಂಗಡಿಗೆ ಡಿಕ್ಕಿ ಹೊಡೆದಿದೆ.
ಏಕಾಏಕಿ ಬಸ್ ಸ್ಟೇರಿಂಗ್ ರಾಡ್ ಕಟ್ಟಾದ ಹಿನ್ನೆಲೆ ಅವಘಡ ಅವಾಂತವಾಗಿದ್ದು. ಬಸ್ ಚಾಲಕ ಶಿವಾನಂದ ವಡ್ಡರ್ ಎಂಬುವವನಿಗೆ ಸ್ಥಳೀಯರಿಂದ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಘಟನೆಯಲ್ಲಿ ಎರಡು ಬೈಕ್ ಗಳು ಜಖಂ ಗೊಂಡಿವೆ. ಬಸನಲ್ಲಿ ಇದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳು ಆಗಿವೆ.