ಮದುವೆಯ ಪಾರ್ಟಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕುಡಿದ ನಶೆಯಲ್ಲಿ ಜಗಳ ತೆಗೆದು ಯುವನೋರ್ವನನ್ನು ಮೃಗಗಳಂತೆ ಕಚ್ಚಿ ಗಾಯಗೊಳಿಸಿ ಹಲ್ಲೆ ನಡೆಸಿದ ಘಟನೆ ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದ ಹೊರವಲಯದಲ್ಲಿ ಸ್ನೇಹಿತನೊಬ್ಬರ ಮದುವೆಯ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಇಲ್ಲಿ ಸುಮಾರು 200 ಜನ ಸೇರಿದ್ದರು. ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಯುವನೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆ. ಅಷ್ಟೇ ಅಲ್ಲದೇ ಬಿ.ಕೆ.ಕಂಗ್ರಾಳಿ ಗ್ರಾಮದಲ್ಲಿರುವ ಯುವಕ ಪ್ರದೀಪ್ ಅಷ್ಟೇಕರ ಮನೆಗೆ ನುಗ್ಗಿ ಹಲ್ಲೆ ನಡೆಸಿ, ತಲೆ ಮತ್ತು ತುಟಿ, ಹಣೆ, ಕಣ್ಣಿನ ಭಾಗಕ್ಕೆ ಮೃಗಗಳಂತೆ ಕಚ್ಚಿ ಗಾಯಗೊಳಿಸಲಾಗಿದೆ. ಸದ್ಯ ಗಾಯಾಳು ಪ್ರದೀಪ ಅಷ್ಟೇಕರ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಮದುವೆಯ ಪಾರ್ಟಿಯಲ್ಲಿ ಊಟ ಮಾಡಲೂ ನೀಡಿದ ಮನೆಯಿಂದ ತೆಗೆದುಕೊಂಡು ಹೋದ ಚಾಪೆಯನ್ನು ಮರಳಿ ಕೇಳಿದಾಗ ಮೂರು ಜನರು ಜಗಳ ತೆಗೆದು, ಬೀಳಿಸಿ ಹಲ್ಲೆ ಮಾಡಿದ್ದರು. ಅಷ್ಟೇ ಅಲ್ಲದೇ ಮನೆಗೆ ಬಂದು ಕಲ್ಲು ತೂರಾಟ ನಡೆಸಿ, ಮತ್ತೇ ಮನೆ ಮಂದಿಯ ಮೇಲೆಲ್ಲ ಹಲ್ಲೆ ನಡೆಸಿ, ಯುವಕನ್ನು ಚರಂಡಿಯಲ್ಲಿ ಬೀಳಿಸಿ ಬಾಯಿಯಿಂದ ಮೃಗಗಳಂತೆ ಬಾಯಿಯಿಂದ ಕಚ್ಚಿದ್ದಾನೆ. ಪ್ರಭಾ ಚಿಕಲಕರ ತಿಳಿಸಿದರು.
ಮದುವೆಯ ಪಾರ್ಟಿಯಲ್ಲಿ ಊಟ ಮಾಡಲೂ ಮನೆಯಿಂದ ಚಾಪೆಯನ್ನು ತೆಗೆದುಕೊಂಡು ಹೋಗಲಾಗಿತ್ತು. ಅದನ್ನ ಮರಳಿ ಕೇಳಿದಾಗ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಇಷ್ಟಕ್ಕೆ ಸುಮ್ಮನಿರದೇ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಮೃಗಗಳಂತೆ ಬಾಯಿಂದ ಕಚ್ಚಿ, ತುಟಿಯ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಕಚ್ಚಿದ ಗಾಯಕ್ಕೆ 8 ಹೊಲಿಗೆಗಳು ಬಿದ್ದಿವೆ ಎಂದು ಗಾಯಾಳು ಪ್ರದೀಪ್ ತಿಳಿಸಿದರು. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.