ಕಾನೂನು ವ್ಯವಸ್ಥೆಯನ್ನು ಕಾಪಾಡುವುದು ಯಾವುದೇ ಸರ್ಕಾರದ ಕರ್ತವ್ಯವಾಗಿರುತ್ತದೆ. ಪಂಚಮಸಾಲಿ ಹೋರಾಟಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕೈಗೊಂಡ ಕ್ರಮವನ್ನು ಸರ್ಕಾರ ಸಮರ್ಥಿಸುತ್ತದೆ ಎಂದು ಸಚಿವ ಕೆ. ಎನ್. ರಾಜಣ್ಣ ಹೇಳಿದರು. ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು.
ಪಂಚಮಸಾಲಿಗರ ಮೇಲೆ ಮಾಡಿರುವುದು ನಿಯೋಜಿತ ಹಲ್ಲೆ. ರಾಜಕೀಯ ಪ್ರಾಯೋಜಿತವಾಗಿ ಈ ಹಲ್ಲೆಯನ್ನು ನಡೆಸಲಾಗಿದೆ ಎಂದು ಆರೋಪಿಸಿರುವ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ ಹೇಳಿಕೆಗೆ ಅವರು ಯಾವುದೇ ಸರ್ಕಾರ ಇರಲಿ ಜನರು ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗಳ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ಜನರಿಗೆ ತೊಂದರೆಯಾಗದಂತೆ ಕಾನೂನು ವ್ಯವಸ್ಥೆ ಕಾಪಾಡುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತದೆ ಅದನ್ನು ಟೀಕಿಸುವುದು ಸರಿಯಲ್ಲ. ಒಂದು ಬಾರಿ ಯೋಚಿಸಿ ನೋಡಿ ಹೋರಾಟಗಾರರು ಸುವರ್ಣ ಸೌಧಕ್ಕೆ ನುಗ್ಗಿದರೆ ಏನಾಗುತ್ತಿತ್ತು ಎಂದು. ಪೊಲೀಸರು ಅದನ್ನು ನಿಯಂತ್ರಿಸಿದ್ದಾರೆ ಸರ್ಕಾರ ಅದನ್ನ ಸಮರ್ಥಿಸುತ್ತದೆ ಎಂದರು.
ಇನ್ನು ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಸಂಬಂಧಿಸಿ ದಂತೆ ತಮ್ಮ ನಿಲುವೇನು ಎಂದು ಕೇಳಿದಾಗ ಪಂಚಮಸಾಲಿ ಸಮಾಜವನ್ನು 2a ನಲ್ಲಿ ಸೇರಿಸಿದರೆ ಈಗಾಗಲೇ ಇರುವ ಜನರಿಗೆ ತೊಂದರೆ ಆಗಬಹುದು. ಆದ್ದರಿಂದ ಅವರೆಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ವಿಧಾನಸಭೆಯಲ್ಲಿ ಚರ್ಚೆಯಾದ ಬಳಿಕ ನಿರ್ಣಯ ಕೈಗೊಳ್ಳುವ ಬಗ್ಗೆ ಯೋಚಿಸಲಾಗುವುದು ಎಂದರು.