ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿ ಶ್ರೀ ರೇಣುಕಾ ಎಲ್ಲಮ್ಮದೇವಿ ಮುಸ್ಲಿಂ ಭಕ್ತನೊಬ್ಬನಲ್ಲಿ ತನ್ನ ಕ್ಷೇತ್ರಕ್ಕೆ ರೈಲು ಸೇವೆ ಆರಂಭಿಸಲು ಹೋರಾಟ ನಡೆಸುವಂತೆ ಹೇಳಿದ್ದಾಳಂತೆ.
ಹೌದು, ಇಂದು ಬಾಗಲಕೋಟೆಯಿಂದ ಬೆಳಗಾವಿ ತಾಲೂಕಿನ ಸವದತ್ತಿ ಉಗರಗೋಳದ ಶ್ರೀ ರೇಣುಕಾ ಎಲ್ಲಮ್ಮನ ಗುಡ್ಡಕ್ಕೆ ಬಂದ ಕುತ್ಬುದ್ಧೀನ ಖಾಜಿ ಎಂಬ ಇಸ್ಲಾಂ ಧರ್ಮದ ಭಕ್ತನೋರ್ವ ತಾಯಿ ರೇಣುಕೆ ತನ್ನ ಕ್ಷೇತ್ರಕ್ಕೆ ರೈಲು ಸೇವೆ ಆರಂಭಿಸಲು ತಮ್ಮ ಬಳಿ ಬಂದು ಇಚ್ಛೆಯನ್ನು ಪ್ರಕಟಿಸಿದ್ದಾಳೆಂದು ಹೇಳಿ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದ್ದಾನೆ.
ಈ ದೇಶದ ಪಿಎಂ-ರಾಜ್ಯದ ಸಿಎಂ ವಿವಿಧ ಸಚಿವರು ಮಂತ್ರಿ ಮಹೋದಯರು ದೇವಿ ದರ್ಶನಕ್ಕೆ ಯಲ್ಲಮ್ಮನಗುಡ್ಡಕ್ಕೆ ಬಂದರೂ ಅವರ ಬಳಿ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ ತಾಯಿ . ಬೇರೆ ಧರ್ಮದವನಾದ ನನ್ನಲ್ಲಿ ಬಂದು 50 ವರ್ಷದಿಂದ ನೆನೆಗುದಿಗೆ ಬಿದ್ದಿರುವ ರೈಲು ಸೇವೆಯನ್ನು ಆರಂಭಿಸಿ ತನ್ನ ಭಕ್ತರಿಗೆ ಆಗುತ್ತಿರುವ ಅನಾನುಕೂಲವನ್ನು ತಪ್ಪಿಸಬೇಕೆಂದು ಕೇಳಿಕೊಂಡಿದ್ದಾಳಂತೆ.
ಒಟ್ಟಾರೆ ಭಕ್ತರ ಅನಾಕೂಲವನ್ನು ತಪ್ಪಿಸಲು ದೇವಿಯೇ ತನ್ನ ಇಚ್ಛೆಯನ್ನು ಭಕ್ತರ ಮೂಲಕ ಪ್ರಕಟಸಿದ್ದು ಮಾತ್ರ ಅಚ್ಚರಿಯ ಸಂಗತಿಯೇ ಸರಿ.